ಬ್ಯೂಟಿ ಟಿಪ್ಸ್:
ಆದರೆ ಕಣ್ಣು ತುಂಬಾ ಸೂಕ್ಷ್ಮವಾದ ಅಂಗವಾದ್ದರಿಂದ ಕಣ್ಣಿನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದು ಅಗತ್ಯವಾಗುತ್ತದೆ. ಅದಕ್ಕಾಗಿ ಈ ಆಹಾರಗಳ ಸೇವನೆ ಸಹಾಯ ಮಾಡುತ್ತದೆ.
ಹಸಿರು ಸೊಪ್ಪುಗಳ ಸೇವನೆ: ಪಾಲಕ್ನಂತಹ ಹಸಿರು ಸೊಪ್ಪುಗಳ ಸೇವನೆಯಿಂದ ದೇಹಕ್ಕೆ ವಿಟಮಿನ್ ಸಿ, ಬೆಟಾ ಕೆರೊಟಿನ್ ಹೀಗೆ ಅಗತ್ಯ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ಇವು ನೈಸರ್ಗಿಕ ಸನ್ಸ್ಕ್ರಿನ್ಗಳಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ಹಾಗೆ ಕ್ಯಾಟರ್ಯಾಕ್ಟ್ಸ್ನಂತಹ ಸಮಸ್ಯೆಯಿಂದ ಕಣ್ಣನ್ನು ಕಾಪಾಡುತ್ತವೆ.
*ನಟ್ಸ್ ಮತ್ತು ಬೀಜಗಳು: ಬಾದಾಮಿ, ಆ್ಯಪ್ರಿಕಾಟ್ಸ್, ಗೋಡಂಬಿ, ಸೂರ್ಯಕಾಂತಿ ಬೀಜ ಇವೆಲ್ಲವೂ ಕಣ್ಣನ್ನು ಕಾಪಾಡುತ್ತವೆ. ಹಾಗೆ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿರುವ ವಿಟಮಿನ್ ಇ ಯನ್ನು ಒದಗಿಸುತ್ತವೆ.
*ಹಣ್ಣುಗಳು: ಹುಳಿಯಂಶವಿರುವ ಹಣ್ಣುಗಳಾದ ಕಿತ್ತಳೆ, ಮೋಸಂಬಿ, ದಾಳಿಂಬೆ, ದ್ರಾಕ್ಷಿ ಇವುಗಳ ಸೇವನೆಯಿಂದ ಕಣ್ಣಿನ ಟಿಶ್ಶುಗಳ ಆರೋಗ್ಯವನ್ನು ಕಾಪಾಡಬಹುದು. ಹಾಗೆ ಕಣ್ಣಿನ ನರಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ.
*ಕ್ಯಾರೇಟ್: ಕಣ್ಣಿನ ದೃಷ್ಟಿಯ ಆರೋಗ್ಯಕ್ಕೆ ಕ್ಯಾರೆಟ್ ಉತ್ತಮ ಆಹಾರ. ಕ್ಯಾರೇಟ್ನಲ್ಲಿರುವ ಅಂಶಗಳು ಕಣ್ಣನ್ನು ಸನ್ ಡ್ಯಾಮೇಜ್ನಿಂದ ಕಾಪಾಡುತ್ತವೆ. ಈ ತರಕಾರಿಯ ಸೇವನೆಯಿಂದ ಕಣ್ಣಿನ ನರಗಳು ಹಾಗೆ ಮಸಲ್ಸ್ಗಳು ಬಲಗೊಳ್ಳುತ್ತವೆ…….