ಮುಂಬೈ:
ದೇಶದ ನಂಬರ್ ಒನ್ ಆಗರ್ಭ ಶ್ರೀಮಂತ, ರಿಲಯನ್ಸ್ ಇಂಡಸ್ಟ್ರೀಸ್ನ ಮುಖೇಶ್ ಅಂಬಾನಿ ಪುತ್ರನ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಅಂಬಾನಿ ಪುತ್ರ ಆಕಾಶ್ ಹಾಗೂ ಡೈಮಂಡ್ ಕಿಂಗ್ ರಸ್ಸೆಲ್ ಮೆಹ್ತಾ ಶ್ಲೋಕಾ ಮೆಹ್ತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಖೇಶ್ ಅಂಬಾನಿಯ ನೂತನ ಕಟ್ಟಡ ಮುಂಬೈನ ಜಿಯೋ ವರ್ಲ್ಡ್ನಲ್ಲಿ ಅದ್ದೂರಿ ಮದ್ವೆ ನಡೀತು. ಈ ವೈಭವೋಪೇತ ಮದ್ವೆಗೆ ದೇಶ-ವಿದೇಶಗಳಿಂದ ಗಣ್ಯರು ಸಾಕ್ಷಿಯಾದ್ರು.
ದೇಶದ ದಿಗ್ಗಜ ರಾಜಕಾರಣಿಗಳು, ಬಾಲಿವುಡ್ ನಟ ನಟಿಯರು, ಕ್ರಿಕೆಟ್ ಆಟಗಾರರು ಆಕಾಶ್ ಅಂಬಾನಿ ಮದ್ವೆಯಲ್ಲಿ ಭಾಗಿಯಾಗಿದ್ರು. ಆಕಾಶ್ ತಾಯಿ ನಿತಾ, ಬಾಲಿವುಡ್ ನಟರಾದ ಶಾರುಖ್ ಖಾನ್, ರಣಬೀರ್ ಕಪೂರ್, ಕಾಂಗ್ರೆಸ್ ರಾಜೀವ್ ಶುಕ್ಲಾ ಮತ್ತಿತರು ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಕುಣಿದು ಕುಪ್ಪಳಿಸಿದ್ರು. ನಿನ್ನೆ ಅಂಬಾನಿ ಅವರ ನೂತನ ಕಟ್ಟಡ ಬಾಂದ್ರಾ ಕುರ್ಲಾ ಸಂಕೀರ್ಣದಲ್ಲಿ ಮಂಗಳ ಪರ್ವ ನಡೆದಿದ್ದು, ನಾಳೆ ರಿಷೆಪ್ಷನ್ ನಡೆಯಲಿದೆ……