Breaking News

ಹಿಡ್ಕ ಹಿಡ್ಕ ಒಸಿ ತಡ್ಕ ತಡ್ಕ ಎಂದ ಬ್ರಹ್ಮಚಾರಿ ಸತೀಶ..!

ಹಿಟ್ ಚಿತ್ರಗಳ ರೂವಾರಿಯಾಗಿರೋ ನೀನಾಸಂ ಸತೀಶ್....

SHARE......LIKE......COMMENT......

ಬೆಂಗಳೂರು: 

ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳ ರೂವಾರಿಯಾಗಿರೋ ನೀನಾಸಂ ಸತೀಶ್ ನಟಿಸುತ್ತಿರೋ ಮಹತ್ವಾಕಾಂಕ್ಷೆಯ ಚಿತ್ರ ಬ್ರಹ್ಮಚಾರಿ. ಕನ್ನಡ ಚಿತ್ರರಂಗದ ಅದ್ಧೂರಿ ನಿರ್ಮಾಪಕರೆಂದೇ ಹೆಸರಾಗಿರುವವರು ಉದಯ್ ಮೆಹ್ತಾ ಅವರು ನಿರ್ಮಾಣ ಮಾಡುತ್ತಿರುವ ಬ್ರಹ್ಮಚಾರಿ ಚಿತ್ರಕ್ಕೀಗ ವೇಗವಾಗಿ ಚಿತ್ರೀಕರಣ ನಡೆಯುತ್ತಿದೆ. ಚಂದ್ರಮೋಹನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಮಜಬೂತಾಗಿರೋ ಹಾಡೊಂದರ ಚಿತ್ರೀಕರಣವೀಗ ಮಜವಾಗಿಯೇ ನಡೆಯುತ್ತಿದೆ.ಹಿಡ್ಕ ಹಿಡ್ಕ ಒಸಿ ತಡ್ಕ ತಡ್ಕ ಎಂಬ ಹಾಡಿನ ಚಿತ್ರೀಕರಣವೀಗ ನಡೆಯುತ್ತಿದೆ.  ಈ ಹಿಂದೆಯೂ ನೀನಾಸಂ ಸತೀಶ್ ಅಭಿನಯದ ಹಲವಾರು ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಮುರಳಿ ಈ ಹಾಡಿಗೂ ನೀನಾಸಂ ಸತೀಶ್ ಅವರನ್ನು ಕುಣಿಸಿದ್ದಾರೆ.ಈ ಹಾಡು ಬ್ರಹ್ಮಚಾರಿ ಚಿತ್ರದ ಹೈಲೈಟ್‍ಗಳಲ್ಲೊಂದಾಗಿ ಮೂಡಿ ಬರಲಿದೆಯಂತೆ…..