Breaking News

ಹಿಮಾಲಯದಲ್ಲಿ ಸ್ನೋ ಮ್ಯಾನ್​..!

ಬೃಹತ್ ಹೆಜ್ಜೆ ಗುರುತು ಕಂಡು ಭಾರತೀಯ ಸೇನೆ ಟ್ವೀಟ್....

SHARE......LIKE......COMMENT......

ನವದೆಹಲಿ:

ಆಧುನಿಕ ಯುಗದಲ್ಲೂ ಹಿಮಮಾನವನ ಅಸ್ತಿತ್ವ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿಮಾಲಯದಲ್ಲಿ ಚಾರಣ ಕೈಕೊಂಡಿದ್ದ ಭಾರತೀಯ ಸೇನೆಯ ತಂಡಕ್ಕೆ ಬೃಹತ್ ಹೆಜ್ಜೆ ಗುರುತು ಹೋಲುವ ಚಿತ್ರ ಲಭ್ಯವಾಗಿದ್ದು, ಸೇನೆ ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದೆ. ಇದು ಹಿಮಮಾನವನ ಹೆಜ್ಜೆ ಗುರುತು ಇರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಏಪ್ರಿಲ್ 9ರಂದು ಸೇನೆಯ ತಂಡವೊಂದು ಪರ್ವತಾರೋಹಣ ಕೈಗೊಂಡಿತ್ತು. ಮಕುಲು ಮೂಲ ಶಿಬಿರ ಬಳಿ ಬೃಹತ್ ಹೆಜ್ಜೆ ಗುರುತುಗಳು ಕಂಡಿದ್ದವು. ಅವು 32 X 15 ಅಡಿ ಗಾತ್ರ ಹೊಂದಿದ್ದವು. ಈ ಹಿಂದೆ ಕೂಡ ಇದೇ ರೀತಿಯ ಗುರುತು ಮಕಲು-ಬುರುನ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿ ಕೊಂಡಿತ್ತು ಎಂದು ಭಾರತೀಯ ಸೇನೆ ಟ್ವೀಟ್​ ಮಾಡಿದೆ…….