ಡೀಸೆಲ್ನಲ್ಲಿ ಇಳಿಕೆ..!
ಗ್ರಾಹಕರಿಗೆ ತುಸು ನೆಮ್ಮದಿ....
ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಲೀಟರ್ ಡೀಸೆಲ್ ದರ 13 ಪೈಸೆ ತಗ್ಗಿದ್ದರೆ ಪೆಟ್ರೋಲ್ ದರ ಯಥಾಸ್ಥಿತಿಯಲ್ಲಿದೆ. ಕಚ್ಚಾ ತೈಲ ಉತ್ಪಾದನೆಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತದಿಂದ ಜಾಗತಿಕ ಪೇಟೆಯಲ್ಲಿ ಕಚ್ಚಾ ಇಂಧನ ದರ ಇಳಿಕೆ ಆಗುತ್ತಿತ್ತು. ಒಪೆಕ್ ಸದಸ್ಯ ರಾಷ್ಟ್ರಗಳು ಸಭೆ ನಡೆಸಿ ಉತ್ಪಾದನೆ ಪ್ರಮಾಣ ತಗ್ಗಿಸಿದ ಬಳಿಕ ಮತ್ತೆ ಏರುಗತಿಯತ್ತ ಸಾಗಿದ್ದ ಇಂಧನವು, ದೇಶೀಯ ಚಿಲ್ಲರ ಮಾರುಕಟ್ಟೆಯಲ್ಲಿ ಮೇಲ್ಮುಖವಾಗಿತ್ತು. ಇಂದು ಡೀಸೆಲ್ನಲ್ಲಿ ಇಳಿಕೆ ಕಂಡಿದ್ದು ಗ್ರಾಹಕರಿಗೆ ತುಸು ನೆಮ್ಮದಿ ಸಿಕ್ಕಂತ್ತಾಗಿದೆ.ಭಾನುವಾರ ಸಿಲಿಕಾನ್ ಸಿಟಿಯಲ್ಲಿ ಲೀ. ಪೆಟ್ರೋಲ್ ದರ ₹ 70.19 ಇದ್ದರೆ ಡೀಸೆಲ್ ಬೆಲೆ 13 ಪೈಸೆ ಇಳಿಕೆ ಕಂಡು ₹ 64.73 ಮಾರಾಟವಾಯಿತು……