Breaking News

ಪ. ಪಂ. ಚುನಾವಣೆಗೆ ಜಿಲ್ಲಾಡಳಿತದಿಂದ ಅಂತಿಮ ಸಿದ್ಧತೆ..!

ಕೊಡಗಿನ 3ಪಟ್ಟಣ ಪಂಚಾಯತ್‌ಗಳಿಗೆ ಅ.28ರಂದು ಮತದಾನ....

SHARE......LIKE......COMMENT......

ಮಡಿಕೇರಿ:

ಕೊಡಗಿನ ಮೂರು ಪಟ್ಟಣ ಪಂಚಾಯತ್‌ಗಳಿಗೆ ಅ.28ರಂದು ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅವರು ಸೋಮವಾರಪೇಟೆ ಪ.ಪಂ. 11 ಮತಗಟ್ಟೆಗಳಿಗೆ, ಕುಶಾಲನಗರ 16 ಮತಗಟ್ಟೆಗಳಲ್ಲಿ, ವಿರಾಜಪೇಟೆಯ 18 ಮತಗಟ್ಟೆ ಒಟ್ಟು 45 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಕುಶಾಲನಗರ ಪಟ್ಟಣ ಪಂಚಾಯತ್‌ ಸಂಬಂಧಿಸಿದಂತೆ ಕಾಂಗ್ರೆಸ್‌ನಿಂದ 16, ಬಿ.ಜೆ.ಪಿ, 16, ಜೆ.ಡಿ.ಎಸ್‌.16, ಎಸ್‌.ಡಿ.ಪಿ.ಐ 2, ಪಕ್ಷೇತರರು 14 ಒಟ್ಟು 64 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.ಸೋಮವಾರಪೇಟೆ ಪ.ಪಂ.ಯಲ್ಲಿ ಕಾಂಗ್ರೆಸ್‌ನ 6, ಬಿ.ಜೆ.ಪಿಯ 11, ಜೆ.ಡಿ.ಎಸ್‌.ನ 5 ಪಕ್ಷೇತರರು 4 ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿರಾಜಪೇಟೆ ಪ.ಪಂ.ಯಲ್ಲಿ ಕಾಂಗ್ರೆಸ್‌ ನ 14, ಬಿ.ಜೆ.ಪಿ.ಯ18, ಜೆ.ಡಿ.ಎಸ್‌.ನ 4, ಎನ್‌.ಸಿ.ಪಿ.ಯ1, ಎಸ್‌.ಡಿ.ಪಿ.ಐ,ಯ 2, ಡಬ್ಲೂ.ಪಿ.ಐ. ಯ2, ಪಕ್ಷೇತರರು 14 ಒಟ್ಟು 55 ಮಂದಿ ಕಣದಲ್ಲಿದ್ದಾರೆ.

ಸೂಕ್ಷ್ಮ,ಅತೀ ಸೂಕ್ಷ್ಮ ಮತ್ತು ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಸೋಮವಾರಪೇಟೆ ಪ.ಪಂ.ಯಲ್ಲಿ 3 ಸೂಕ್ಷ್ಮ, 2 ಅತೀ ಸೂಕ್ಷ್ಮ, 6 ಸಾಮಾನ್ಯ ಮತಗಟ್ಟೆಗಳು, ಕುಶಾಲನಗರ ಪಟ್ಟಣ ಪಂಚಾಯಿತಿಯಲ್ಲಿ 4 ಸೂಕ್ಷ್ಮ, 3 ಅತೀಸೂಕ್ಷ್ಮ, 9 ಸಾಮಾನ್ಯ ಮತಗಟ್ಟೆಗಳು, ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ 3 ಸೂಕ್ಷ್ಮ, 2 ಅತೀಸೂಕ್ಷ್ಮ, 13 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಒಟ್ಟಾರೆ 45 ಮತಗಟ್ಟೆಗಳಲ್ಲಿ 10 ಸೂಕ್ಷ್ಮ, 7 ಅತೀ ಸೂಕ್ಷ್ಮ ಮತ್ತು 28 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ-2018ರ ಮತದಾನವನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅಕ್ಟೋಬರ್‌, 26ರ ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್‌, 28ರ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಥ್‌ ಗಳ ವ್ಯಾಪ್ತಿಯಲ್ಲಿ ಎಲ್ಲಾ ವಿಧದ ಮದ್ಯ ಸಾಗಾಣಿಕೆ, ಶೇಖರಣೆ ಮತ್ತು ಎಲ್ಲ  ರೀತಿಯ ಅಂಗಡಿ, ಬಾರ್‌ ಮತ್ತು ರೆಸ್ಟೋರೆಂಟ್‌, ಕ್ಲಬ್‌, ಹೋಟೆಲ್‌ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ –ಆದೇಶ ಹೊರಡಿಸಿದ್ದಾರೆ……