Breaking News

2 ಸಾವಿರ ರೂ.ಗೆ ಬೇಯಿಸಿದ ಗಾಳಿ..!

ಫೆವಾ ರೆಸ್ಟೋರೆಂಟ್‌ನಲ್ಲಿ ಅಗಿದು ತಿನ್ನುವ ಗಾಳಿ....

SHARE......LIKE......COMMENT......

ದೇಶ-ವಿದೇಶ:

ಪ್ರಕೃತಿಯಲ್ಲಿ ಮೈಮರೆತು ಆಹ್ಲಾದವಾಗಿ ಬೀಸುವ ಗಾಳಿಯನ್ನು ದೀರ್ಘವಾಗಿ ಎಳೆದುಕೊಳ್ಳುವುದರಲ್ಲಿ ಸಖತ್‌ ಥ್ರಿಲ್‌ ಇರುತ್ತದೆ. ಆದರೆ ನೀವು ಎಂದಾದರು ಗಾಳಿಯನ್ನು ಅಗಿದು ತಿಂದಿದ್ದೀರಾ?

ಇಟಲಿಯ ಕ್ಯಾಸೆಲ್‌ಫ್ರಾಂಕೊ ವೆನೆಟೊ ನಗರದಲ್ಲಿರುವ ಫೆವಾ ರೆಸ್ಟೋರೆಂಟ್‌ನಲ್ಲಿ ಅಗಿದು ತಿನ್ನುವ ಬೇಯಿಸಿದ ಗಾಳಿ ಸಿಗುತ್ತದೆ. ಇದು ಇತ್ತೀಚೆಗೆ ಕಂಡುಕೊಂಡ ಹೊಸ ಮೆನುವಾಗಿದೆ. ಏರಿಯಾ ಫ್ರಿಟ್ಟಾ ಎಂದು ಕರೆಯಲಾಗುವ ಈ ಮೆನುವಿನ ಅರ್ಥ ಫ್ರೈಡ್‌ ಏರ್‌, ಅರ್ಥಾತ್‌ ಬೇಯಿಸಿ ಗಾಳಿ.

ಇದರ ಬೆಲೆ 30 ಡಾಲರ್‌ ಇದೆ. ಅಂದರೆ 2,086 ರೂ. ರೆಸ್ಟೋರೆಂಟ್‌ನಲ್ಲೇ ಕುಳಿತು ಬೆಟ್ಟಗುಡ್ಡಗಳ ನಡುವೆ ಬೀಸುವ ತಾಜಾ ಗಾಳಿಯನ್ನು ಸೇವಿಸಬಹುದು ಎನ್ನುತ್ತಾರೆ ಅಲ್ಲಿನ ಚೆಫ್‌ ನಿಕೊಲಾ ಡಿನಟೊ.

ಗಾಳಿಯ ಪದರವಾಗಿ ಟಾಪಿಯಾಕೊ ಕಾರ್ಯ ನಿರ್ವಹಿಸುತ್ತದೆ. ಆರಂಭದಲ್ಲಿ ಟಾಪಿಯಾಕೊ ಪದರವನ್ನು ಬೇಯಿಸಲಾಗುತ್ತದೆ. ಇದು ಗಾಳಿಯನ್ನು ಒಣಗಿಸಲು ಸಹಾಯ ಮಾಡುತ್ತದೆ. ಗಾಳಿಯು ಓಜೋನ್‌ ಆಗಿ ಪರಿವರ್ತನೆಗೊಂಡ ನಂತರ ಮೋಡದ ತುಂಡುಗಳಂತೆ ಕಾಣಿಸುತ್ತದೆ……