ಬೆಂಗಳೂರು:
ಮೆಟ್ರೊ ಎರಡನೇ ಹಂತದ ಆರ್.ವಿ.ರಸ್ತೆ-ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ-ನಾಗವಾರ ಮಾರ್ಗದ ನಿರ್ಮಾಣಕ್ಕಾಗಿ ಜಯದೇವ ಆಸ್ಪತ್ರೆ ಬಳಿಯ ಮೇಲುರಸ್ತೆಯನ್ನು ತೆರವುಗೊಳಿಸುವ ಕಾಮಗಾರಿ 2019ರ ಮಾರ್ಚ್‌ನಿಂದ ಆರಂಭವಾಗಲಿದೆ.
ಹತ್ತು ವರ್ಷಗಳ ಹಿಂದೆ 21 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೇಲುರಸ್ತೆ ನಿರ್ಮಿಸಿತ್ತು. ಮೆಟ್ರೊ ಎತ್ತರಿಸಿದ ಮಾರ್ಗಕ್ಕಾಗಿ ಈ ಮೇಲುರಸ್ತೆಯನ್ನು ತೆರವುಗೊಳಿಸುವ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ನಿರ್ವಹಿಸಲಿದೆ,ಇಂತಹ ಸಮಯದಲ್ಲಿ ಮೇಲುರಸ್ತೆಯನ್ನು ಕೆಡವಿ ಹಾಕಿದರೆ, ಪರ್ಯಾಯ ಸಂಚಾರ ವ್ಯವಸ್ಥೆ ಮಾಡಿದರೂ ಸಂಚಾರ ದಟ್ಟಣೆ ಅತಿಯಾಗುತ್ತದೆ. ಹೀಗಾಗಿ ಮೇಲುರಸ್ತೆ ತೆರವುಗೊಳಿಸುವ ಕಾಮಗಾರಿಯನ್ನು ಪದೇಪದೆ ಮುಂದೂಡಲಾಗಿತ್ತು.
ಈಗ 2019ರ ಮಾರ್ಚ್‌ನಿಂದ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ,ಬಿಬಿಎಂಪಿ, ಸಂಚಾರ ಪೊಲೀಸರೂ ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಮೇಲುರಸ್ತೆಯನ್ನು ತೆರವುಗೊಳಿಸುವ ಕಾಮಗಾರಿ ನಡೆಯಲಿದೆ.ಎಂದು ಬಿಎಂಆರ್‌ಸಿಎಲ್ ಹೆಚ್ಚುವರಿ ಮುಖ್ಯ ಎಂಜಿನಿಯರ್ ಬಿ.ಸಿ.ನಟರಾಜ್ ತಿಳಿಸಿದರು……