ತುಮಕೂರು:
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿಗಳು 70ರ ದಶಕದಲ್ಲೇ ತಮ್ಮ ಪವಿತ್ರ ಸಮಾಧಿಯ ಸ್ಥಳ ಮತ್ತು ರೂಪುರೇಷೆಗಳನ್ನು ನೀಡಿದ್ದರಂತೆ. 70 ರ ದಶಕದಲ್ಲಿ ಎಪ್ಪತ್ತನೇ ವರ್ಷದಲ್ಲಿದ್ದಾಗಲೇ ಶ್ರೀಗಳು ತಾವು ಐಕ್ಯವಾಗುವ ಸ್ಥಳವನ್ನು ಸೂಚಿಸಿದ್ದರು. ಸ್ವಾಮೀಜಿಗಳು ಐಕ್ಯವಾಗಲು ಸ್ಥಳ ಹುಡುಕುತ್ತಿದ್ದಾಗ ಅವರ ಹಿರಿಯ ಗುರುಗಳು ನೀರೆರೆದು ಪೋಷಿಸಿದ್ದ ಬೃಹತ್ ಆಲದ ಮರ ರಾತ್ರೋರಾತ್ರಿ ನೆಲಕ್ಕುರುಳಿತ್ತು. ಇದೇ ಸ್ಥಳ ಆಯ್ದುಕೊಂಡು 39 ವರ್ಷಗಳ ಹಿಂದೆ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗುವ ಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು. ಕಾರಣಾಂತರಗಳಿಂದ ನಡುವೆ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಇತ್ತೀಚೆಗೆ ವೇಗ ಪಡೆದಿದ್ದು ಶ್ರೀಗಳು ಲಿಂಗೈಕ್ಯರಾಗುವ ವೇಳೆಗೆ…….