Breaking News

ಧೋನಿಯೇ ನನ್ನ ಮೊದಲ ಆಯ್ಕೆ:ABD

ತಂಡದಿಂದ ಕೈಬಿಡಿ ಎಂದ ಟೀಕಾಕಾರರಿಗೆ ತಿರುಗೇಟು....

SHARE......LIKE......COMMENT......

ಮುಂಬೈ:

ಧೋನಿಗೆ 80 ವರ್ಷ ವಯಸ್ಸಾಗಿ, ಅವರು ವ್ಙೀಲ್ ಚೇರ್ ಮೇಲಿದ್ದರೂ ತಂಡಕ್ಕೆ ಅವರೇ ನನ್ನ ಮೊದಲ ಆಯ್ಕೆಯಾಗಿರುತ್ತಾರೆ ಎಂದು ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಸುದ್ದಿ ಸಂಸ್ಥೆಯೊಂದರ ಚಿಟ್ ಚಾಟ್ ನಲ್ಲಿ ಮಾತನಾಡಿದ ಎಬಿಡಿ ಧೋನಿ ನಿವೃತ್ತಿ ಕುರಿತು ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸುವ ಮೂಲಕ ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದರು.

ಧೋನಿ ಅವರನ್ನು ತಂಡದಿಂದ ಕೈ ಬಿಡುವ ಕುರಿತ ಪ್ರಶ್ನೆ ಕೇಳುತ್ತಿದಂತೆ ನಗೆ ಬೀರಿದ ಎಬಿಡಿ, ಧೋನಿ ಅವರಿಗೆ 80 ವರ್ಷ ವಯಸ್ಸಾಗಿ, ವ್ಙೀಲ್‍ಚೇರ್ ಮೇಲಿದ್ದರೂ ನನ್ನ ತಂಡದಲ್ಲಿ ಖಾಯಂ ಸ್ಥಾನ ನೀಡುತ್ತೇನೆ. ಧೋನಿ ವೈಯುಕ್ತಿಕ ದಾಖಲೆಗಾಗಿ ಅಲ್ಲ, ತಂಡದ ಗೆಲುವಿಗಾಗಿ ಆಡುತ್ತಾರೆ. ಇದು ಅವರ ದಾಖಲೆಗಳು ನೋಡಿದರೆ ಎಲ್ಲವೂ ಆರ್ಥವಾಗುತ್ತದೆ. ಮೈದಾನದಲ್ಲಿ ಧೋನಿ ಇದ್ದರೆ ತಂಡದ ಎಲ್ಲ ಆಟಗಾರರಿಗೂ ಸ್ಪೂರ್ತಿಯಾಗಿರುತ್ತಾರೆ. ಅಂತಹ
ಆಟಗಾರರನ್ನು ತಂಡದಿಂದ ಡ್ರಾಪ್ ಮಾಡುತ್ತಾರಾ ಎಂದು ಎಬಿಡಿ ಮರು ಪ್ರಶ್ನೆ ಮಾಡಿದರು.

ಇತ್ತೀಚೆಗೆ ಧೋನಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಂದು ತಂಡದ ನಾಯಕ ಕೊಹ್ಲಿ ಅವರ ಬೆನ್ನಿಗೆ ನಿಂತಿದ್ದರು. ಇಂದು ಎಬಿಡಿ ನಿಂತಿದ್ದಾರೆ. ಇನ್ನು ಹಾಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಧೋನಿ ಆಡುತ್ತಿದ್ದು, ಮೊದಲ ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ದೊರೆಯಲಿಲ್ಲ. ಉಳಿದ ಪಂದ್ಯಗಳಲ್ಲಿ ಧೋನಿ ಭರ್ಜರಿ ಬ್ಯಾಟಿಂಗ್ ಮಾಡಿ ಟೀಕಾರರ ಬಾಯಿ ಮುಚ್ಚಿಸಬೇಕಿದೆ……