ಟಾಲಿವುಡ್/ಸಿನಿಮಾ:
ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಬಾಹುಬಲಿ ಬಿಗ್ ಸಕ್ಸಸ್ ಬಳಿಕ ಮಲ್ಟಿಸ್ಟಾರರ್ ಕಥೆಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್ಆರ್ಆರ್ ಎನ್ನುವ ತಾತ್ಕಾಲಿಕ ಹೆಸರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಸೋಮವಾರದಿಂದ ಎರಡನೇ ಹಂತದ ಶೂಟಿಂಗ್ ಆರಂಭಿಸಿದೆ. ರಾಜಮೌಳಿಯ ನೆಚ್ಚಿನ ನಟ ಜ್ಯೂ. ಎನ್ಟಿಆರ್ ಹಾಗೂ ರಾಮ್ಚರಣ್ ತೇಜ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
RRR ಸಿನಿಮಾಗೆ ಚಿತ್ರೀಕರಣದ ಹಂತದಲ್ಲೇ ಭರ್ಜರಿ ಆಫರ್ ಬಂದಿದೆ,ಖ್ಯಾತ ಝೀ ಸಂಸ್ಥೆ ಸ್ಯಾಟಲೈಟ್ ಹಾಗೂ ಆಡಿಯೋ ರೈಟ್ಸ್ಗೆ ಆಫರ್ ಮಾಡಿದೆ ಶೂಟಿಂಗ್ ಹಂತದಲ್ಲೇ ಈ ಚಿತ್ರಕ್ಕೆ ಭಾರಿ ಡಿಮ್ಯಾಂಡ್ ಬಂದಿದೆ. ಸುಮಾರು ಮುನ್ನೂರು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ
ತೆಲುಗು, ತಮಿಳು ಹಾಗೂ ಹಿಂದಿ ವರ್ಷನ್ಗೆ ಈ ಭಾರಿ ಮೊತ್ತದ ಆಫರ್ ನೀಡಲಾಗಿದ್ದು ಆದರೆ ನಿರ್ಮಾಪಕ ಡಿವಿವಿ ದಾನಯ್ಯ ಇದನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. 200 ಕೋಟಿ ನೀಡಿದಲ್ಲಿ ಮಾತ್ರ ಸ್ಯಾಟಲೈಟ್ ಹಾಗೂ ಆಡಿಯೋ ಹಕ್ಕು ನೀಡುವುದಾಗಿ ಹೇಳಿದ್ದಾರೆ….