Breaking News

ಮಹಾ ಹೈಡ್ರಾಮಾಗೆ ಇಂದೇ ಕ್ಲೈಮ್ಯಾಕ್ಸ್​..!?

ಶಿಂಧೆಗೆ 37 ಶಿವಸೇನೆ ಶಾಸಕರ ಬಲ....

SHARE......LIKE......COMMENT......

ಮಹಾರಾಷ್ಟ್ರ:

ಮಹಾ ಹೈಡ್ರಾಮಾ ಇಂದು ಕ್ಲೈಮ್ಯಾಕ್ಸ್​ ಅಂತ ತಲುಪುವ ಸಾಧ್ಯತೆಯಿದೆ. ಏಕನಾಥ ಶಿಂದೆ ನಮ್ಮ ನಾಯಕ ಎಂದು ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ್​​ಗೆ ​​​ ಶಿವಸೇನೆಯ 37 ಶಾಸಕರು ಅಸ್ಸಾಂನ ಗುವಾಹಟಿ ಱಡಿಸನ್​​​ ಹೋಟೆಲ್​​​ನಿಂದ ಪತ್ರ ಬರೆದಿದ್ದಾರೆ. ನಮ್ಮದೇ ಬಾಳಾ ಸಾಹೇಬ ಕಟ್ಟಿದ ನಿಜವಾದ ಶಿವಸೇನೆ ಏಕನಾಥ್​ ಶಿಂಧೆ ನಮ್ಮ ನಾಯಕ ಎಂದು ಉಪಸಭಾಧ್ಯಕ್ಷಗೆ ಪತ್ರದಲ್ಲಿ ಶಾಸಕರು ಉಲ್ಲೇಖಿಸಿದ್ದಾರೆ.

ಸದ್ಯ ಸಿಎಂ ಉದ್ಧವ್​​ ಠಾಕ್ರೆ ಬಳಿ ಕೇವಲ 12 ಮಂದಿ ಶಾಸಕರ ಬೆಂಬಲವಿದ್ದು, ಶಿಂಧೆ ಟೀಂ ಸರ್ಕಾರ ರಚಿಸಲು ಬಿಜೆಪಿ ಸಾಥ್​ ನೀಡೋ ತಯಾರಿ ಕೂಡ ನಡೆಯುತ್ತಿದೆ, ಮತ್ತೊಂದೆಡೆ ಶಿಂಧೆ ಟೀಂ ಅನರ್ಹತೆಗೆ ಶಿವಸೇನೆ ಪ್ಲಾನ್ ಮಾಡುತ್ತಿದೆ, ​​​ಒಟ್ಟಿನಲ್ಲಿ ಸಂಜೆವರೆಗೆ ಮಹಾ ಹೈಡ್ರಾಮಾ ಕ್ಲೈಮ್ಯಾಕ್ಸ್​ ತಲುಪುವ ಸಾಧ್ಯತೆಯಿದೆ…..