ಬೆಂಗಳೂರು :
ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದ ದುಷ್ಟರು, ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಎಂದು ಚಂದಾ ವಸೂಲಿ ಮಾಡಿದ್ದಾರೆ. ಇವರ ವ್ಯವಹಾರ ಫುಲ್ ಆನ್ಲೈನ್ನಲ್ಲೇ ವ್ಯವಹಾರ ನಡೆಸಲಾಗಿದ್ದು, ಹಣ ಹಾಕಿದ ಬಳಿಕ ಧನ್ಯವಾದಗಳನ್ನು ಕಳುಹಿಸಲಾಗುತ್ತಿತ್ತು.
ಈ ವಿಚಾರ ರೂಪಾ ಅವರ ಗಮನಕ್ಕೆ ಬಂದ ಬಳಿಕ ಟ್ವೀಟ್ ಮಾಡಿರುವ ಅವರು ನಾನು ಇನ್ಸ್ಟಾಗ್ರಾಂನಲ್ಲಿ ಇಲ್ಲ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡುತ್ತೇನೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿರುವವರು ಈ ವಿಚಾರ ಗಮನಿಸುವಂತೆ ಮನವಿ ಮಾಡುತ್ತೇನೆ ಎಂದು ಬರೆದಿದ್ದಾರೆ…..
This is not my account. I'm not on Instagram. This is brought to my notice only now. Will complain to Cyber crime police station @CIDKarnataka . Meanwhile request those on @instagram to report this issue https://t.co/DBYNDzzTog
— D Roopa IPS (@D_Roopa_IPS) December 28, 2018