ಕೋಲ್ಕತ್ತಾ:
ಮೋದಿ V/S ದೀದಿ..ಯೆಸ್ ಶಾರದಾ ಚಿಟ್ ಫಂಡ್ ಹಗರಣ ಸಂಬಂಧ ಸಿಬಿಐ ಅಧಿಕಾರಿಗಳು ಕೋಲ್ಕತ್ತಾ ನಗರ ಪೋಲೀಸ್ ಆಯುಕ್ತರನ್ನು ತನಿಖೆ ನಡೆಸುವುದರ ವಿರುದ್ಧ ಧರಣಿ ಪ್ರಾರಂಭಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ತೀರ್ಪಿನ ನಂತರ ಮಂಗಳವಾರ ತಮ್ಮ ಧರಣಿ ಯನ್ನು ಕೈಬಿಟ್ಟಿದ್ದಾರೆ.”ಸುಪ್ರೀಂ ಕೋರ್ಟ್ ನ ಆದೇಶದ ಬಳಿಕ ವಿರೋಧ ಪಕ್ಷಗಳ ನಾಯಕರನ್ನು ಸಂಪರ್ಕಿಸಿ ಮಾತನಾಡಿದ್ದು ಇದೀಗ ನಾನು ಧರಣಿ ನಿಲ್ಲಿಸಿದ್ದೇನೆ ಹಾಗೂ ಸುಪ್ರೀಂ ಕೋರ್ಟ್ ಮೇಲೆ ನನಗೆ ವಿಶ್ವಾಸ ಇದೆ” ಎಂದು ಮಮತಾ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಭಾನುವಾರ ರಾತ್ರಿಯಿಂದ ಎಸ್ಪ್ಲಾನೇಡ್ ಪ್ರದೇಶದ ಮೆಟ್ರೋ ಚಾನಲ್ ನಲ್ಲಿ ಕೇಂದ್ರ ಸರ್ಕಾರ ಹಾಗೂ ಸಿಬಿಐ ವಿರುದ್ಧ ಧರಣಿ ಕುಳಿತಿದ್ದರು ಬೆಳಿಗ್ಗೆ ಸಿಬಿಐ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೋಲ್ಕತ್ತಾ ನಗರ ಪೋಲೀಸ್ ಆಯುಕ್ತ ರಾಜೀವ್ ಕುಮಾರ್ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಬೇಕು. ಶಾರದಾ ಹಗರಣ ಸಂಬಂಧದ ವಿಚಾರಣೆಗೆ ಸಹಕರಿಸಬೇಕು ಎಂದು ಆದೇಶಿಸಿದೆ…