ಬೆಂಗಳೂರು:
212ನೇ ಲಾಲ್ ಬಾಗ್ ಫ್ಲವರ್ ಶೋನಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ. ನಿನ್ನೆ ಒಂದೇ ದಿನ 90 ಲಕ್ಷ ಎಂಟ್ರಿ ಶುಲ್ಕ ಸಂಗ್ರಹವಾಗಿದೆ. ನಿನ್ನೆಯೇ ಫಲಪುಷ್ಪ ಪ್ರದರ್ಶನಕ್ಕೆ ವಿದ್ಯುತ್ ತೆರೆ ಬಿದ್ದಿದೆ. ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೇ ಅತೀ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. 11 ದಿನಗಳ ಫಲಪುಷ್ಪ ಪ್ರದರ್ಶನವನ್ನು 8,34,552 ಪ್ರವಾಸಿಗರು ವೀಕ್ಷಿಸಿದ್ದಾರೆ. ದಾಖಲೆ 3 ಕೋಟಿ 31 ಲಕ್ಷದ 90 ಸಾವಿರದ 430 ರೂ ಟಿಕೆಟ್ ಹಣ ಸಂಗ್ರಹವಾಗಿದೆ. ನಿನ್ನೆ ಒಂದೇ ದಿನ 2,99,176 ಪ್ರವಾಸಿಗರು ವೀಕ್ಷಣೆ ಮಾಡಿದ್ದಾರೆ. ಈ ಸಂಬಂಧ ಲಾಲ್ ಬಾಗ್ ತೋಟಗಾರಿಕಾ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.