Breaking News

SSLC ಪರೀಕ್ಷೆಯಲ್ಲಿ ಎಲ್ಲಾ ರೆಕಾರ್ಡನ್ನ ಬ್ರೇಕ್ ಮಾಡಿದ ಬಾಲಕಿಯರು..!

ಈ ಬಾರಿ ಕೂಡ ಬಾಲಕಿಯರೇ ಮೇಲುಗೈ....

SONIA V FAMILY
SHARE......LIKE......COMMENT......

ಬೆಂಗಳೂರು:

ಪ್ರಪ್ರಥಮ ಬಾರಿಗೆ SSLCಯಲ್ಲಿ ಬಾಲಕಿಯರು ಎಲ್ಲಾ ರೆಕಾರ್ಡನ್ನ ಬ್ರೇಕ್ ಮಾಡಿದ್ದಾರೆ TOP 10 RANKನಲ್ಲಿ ಬಾಲಕಿಯರೇ ಟಾಪ್ 8ಸ್ಥಾನಗಳನ್ನ ಪಡೆದುಕೊಂಡಿದ್ದಾರೆ..ಜಿಲ್ಲಾವಾರು ನೋಡಿದರೆ ಅದರಲ್ಲಿ ಕೂಡ ಟಾಪ್….ಜೊತೆಗೆ ಔಟ್ ಅಫ್ ಔಟ್ ಪ್ರತ್ಯೇಕ ವಿಷಯದಲ್ಲೂ ಕೂಡ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ..ಇದರಲ್ಲಿ ಸೋನಿಯಾ ವಿ ಕೂಡಾ ಒಬ್ಬರಾಗಿದ್ದಾರೆ.

ವೆಂಕಟರಮಣ ಹಾಗೂ ಉಮಾ ದಂಪತಿಯ ಪುತ್ರಿಯಾದ ಸೋನಿಯಾ ವಿ ಇಂಗ್ಲೀಷ್ ನಲ್ಲಿ 100, ಕನ್ನಡದಲ್ಲಿ 95, ಹಿಂದಿ 95, ಗಣಿತ 83, ವಿಜ್ಞಾನ 69 ಹಾಗೂ ಸಮಾಜ ವಿಜ್ಞಾನದಲ್ಲಿ 89 ಅಂಕ ಗಳಿಸುವ ಮೂಲಕ ತಂದೆ-ತಾಯಿ ಹಾಗೂ ಸ್ಕೂಲ್ ಗೆ ಕೀರ್ತಿ ತಂದಿದ್ದಾರೆ.

ಸೋನಿಯಾ ವಿ ಬೊಮ್ಮನಹಳ್ಳಿಯ  ಪ್ರೆಸಿಡೆನಸಿ ಇಂಗ್ಲೀಷ್  ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಅವರ ತಂದೆ ವೆಂಕಟರಮಣ ವಿ ADMIN ASSISTANT ಆಗಿ INTEVA PRODUCTSನಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ತಾಯಿ ಪೇಜ್ EXPORTS ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ…

ಈ ಬಾರಿ ಕೂಡ  SSLC ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು. ಶೇ. 79.59 ರಷ್ಟು ಬಾಲಕಿಯರು ಹಾಗೂ ಶೇ. 68.46ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆಯಲ್ಲಿ ಶೇ 73.70ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. …ಕಳೆದ ಬಾರಿ ಮೊದಲ ಸ್ಥಾನ ಗಳಿಸಿದ್ದ ಉಡುಪಿಯನ್ನು ಹಿಂದಿಕ್ಕಿರುವ ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದರೆ, ರಾಮನಗರ ಜಿಲ್ಲೆ ಎರಡನೇ ಸ್ಥಾನ ಗಳಿಸಿದೆ. ಉಡುಪಿ ಜಿಲ್ಲೆ ಐದನೇ ಸ್ಥಾನಕ್ಕೆ ಕುಸಿತ ಕಂಡಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ….

ಈ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ , ಬಿಎಸ್ಎಫ್ ಮಾಜಿ ಯೋಧನ ಪುತ್ರಿ ನಾಗಾಂಜಲಿ ಅವರು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ…