Breaking News

ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ.!

ನಿಕ್ ಜೊತೆಗೆ ಪ್ರಿಯಾಂಕಾ ಛೋಪ್ರಾ ಮದುವೆ..?

SHARE......LIKE......COMMENT......

ಹಾಲಿವುಡ್:

ಕಳೆದ ಕೆಲವು ದಿನಗಳಿಂದ ನಟಿ ಪ್ರಿಯಾಂಕಾ ಛೋಪ್ರಾ ವೈಯುಕ್ತಿಕ ಜೀವನದ ಬಗ್ಗೆಯೇ ಹೆಚ್ಚು ಸದ್ದು-ಸುದ್ದಿ ಆಗುತ್ತಿದೆ. ಬೇಸ್ ಬಾಲ್ ಗೇಮ್ ನೋಡಲು ಅಮೇರಿಕನ್ ಸಿಂಗರ್ ನಿಕ್ ಜೊನಾಸ್ ಜೊತೆ ನಟಿ ಪ್ರಿಯಾಂಕಾ ಛೋಪ್ರಾ ಹೋಗಿದ್ದೇ ತಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರಿಬ್ಬರ ರಿಲೇಶನ್ ಶಿಪ್ ಬಗ್ಗೆ ಗುಸುಗುಸು ಆರಂಭ ಆಯ್ತು.

ತಮಗಿಂತ ಹತ್ತು ವರ್ಷ ಕಿರಿಯನಾಗಿರುವ ನಿಕ್ ಜೊನಾಸ್ ಜೊತೆಗೆ ನಟಿ ಪ್ರಿಯಾಂಕಾ ಛೋಪ್ರಾ ಡೇಟಿಂಗ್ ಮಾಡ್ತಿದ್ದಾರಂತೆ ಎಂಬ ಅಂತೆ-ಕಂತೆ ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲೂ ಗಿರಕಿ ಹೊಡೆಯಲು ಶುರು ಆಯ್ತು. ಯಾವುದೇ ಗಾಸಿಪ್ ಗಳಿಗೂ ಕೇರ್ ಮಾಡದೆ, ಪ್ರಿಯಾಂಕಾ ಛೋಪ್ರಾ ಕೈಹಿಡಿದುಕೊಂಡು ನಿಕ್ ಜೊನಾಸ್ ಭಾರತಕ್ಕೂ ಬಂದಿಳಿದರು ಹಾಗೂ ಪ್ರಿಯಾಂಕಾ ಕುಟುಂಬ ಜೊತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ, ಇವರಿಬ್ಬರ ಮಧ್ಯೆ ಪ್ರೀತಿ ಇರೋದು ನಿಜವೋ, ಸುಳ್ಳೋ.? ಎಂಬ ಡೌಟ್ ಎಲ್ಲರಿಗೂ ಕಾಡುತ್ತಿದೆ. ಹೀಗಿರುವಾಗಲೇ, ಪ್ರಿಯಾಂಕಾ ಛೋಪ್ರಾ ಸಿಹಿ ಸುದ್ದಿ ನೀಡುವ ಸೂಚನೆ ಕೊಟ್ಟಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ನಟಿ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಮದುವೆ ನಡೆಯಲಿದೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

25 ವರ್ಷದ ನಿಕ್ ಜೊನಾಸ್ ಅಮೇರಿಕಾದ ಗಾಯಕ ಹಾಗೂ ನಟ. ‘ಕ್ಯಾಂಪ್ ರಾಕ್’, ‘ಮಿಸ್ಟರ್ ಸನ್ ಶೈನ್’, ‘ಸ್ಮ್ಯಾಶ್’ ಮುಂತಾದ .ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೋನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನಡುವೆ ಹತ್ತು ವರ್ಷಗಳ ಅಂತರವಿದೆ….