ಗುಜರಾತ್:
ಗುಜರಾತ್ನಲ್ಲಿ ಎರಡು ಲಾರಿಗಳ ನಡುವೆ ಅಪಘಾತ ಉಂಟಾಗಿ ಲಾರಿಗಳು ಧಗಧಗ ಹೊತ್ತಿ ಉರಿದಿದೆ. ತಡರಾತ್ರಿ ಅಹಮದಾಬಾದ್-ವಡೋದರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಒಂದು ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೆಂಕಿ ತಗುಲಿದ್ದು ಎರಡೂ ವಾಹನಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಓರ್ವ ವ್ಯಕ್ತಿಗೆ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಲಾರಿ ಅಪಘಾತದಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು……