ರಾಷ್ಟ್ರೀಯ ಸ್ವಯಂ ಸೇವಕ ಹಿಂದೂ ಧರ್ಮದ ರಕ್ಷಣೆ ಜತೆಗೆ ರಾಷ್ಟ್ರೀಯತೆ ಸಾರುವ ಕೆಲಸ ಮಾಡುತ್ತಿದೆ ಎಂದು ಸಂಘದ ಗ್ರಾಮ ವಿಕಾಸ ಪ್ರಾಂತ ಟೋಳಿ ಸದಸ್ಯರು ಮು.ವೆಂಕಟೇಶ್ ಹೇಳಿದರು. ಕುಣಿಗಲ್ ರಸ್ತೆಯ ಸದಾಶಿವನಗರದಲ್ಲಿ ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಆಯೋಜಿಸಿದ್ದ ಗಣವೇಷಧಾರಿಗಳ ಪಥ ಸಂಚಲನದಲ್ಲಿ ಮಾತನಾಡಿದರು.
ದೇಶಭಕ್ತ ಸಂಘಟನೆಯಾದ ಆರ್ಎಸ್ಎಸ್ನಲ್ಲಿ ಹಿಂದೂಗಳು ಮಾತ್ರವಿಲ್ಲ. ಎಲ್ಲ ಧರ್ಮದ ಬಂಧುಗಳು ಶಿಸ್ತಿನ ಸಂಘಟನೆಯಲ್ಲಿ ಸದಸ್ಯರಾಗಿ ದೇಶಸೇವೆಯಲ್ಲಿ ತೊಡಗಿದ್ದಾರೆ. ಪ್ರಪಂಚಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಭಾರತೀಯ ಪರಂಪರೆ ಉಳಿಸುವ ನಿಟ್ಟಿನಲ್ಲಿ ದೇಶದಲ್ಲಿ ಉತ್ತಮ ಕೆಲಸಗಳು ಸಂಘದಿಂದ ನಡೆಯುತ್ತಿವೆ ಎಂದರು.
ದೇಶ ಸೇವೆ ಮಾಡುವ ಯುವಕರ ಸಂಖ್ಯೆ ಜಾಸ್ತಿಯಾಗಬೇಕು. ದೇಶಭಕ್ತಿ ಮೂಡಿಸುವ ಆರ್ಎಸ್ಎಸ್ ಸಂಘಟನೆಯಲ್ಲಿ ತೊಡಗಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಲು ಯುವಕರಿಗೆ ಉತ್ತಮ ಅವಕಾಶವಿದೆ ಎಂದು ಹೇಳಿದರು.ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ ಎನ್.ಎಸ್.ನಾಗೇಂದ್ರಪ್ರಸಾದ್, ನಗರ ಸಂಘಚಾಲಕ ಡಾ.ಪರಮೇಶ್ ಇದ್ದರು. ಸದಾಶಿವ ನಗರದಲ್ಲಿ ನಡೆದ ಗಣವೇಷಧಾರಿಗಳ ಶಿಸ್ತಿನ ಪಥ ಸಂಚಲನದಲ್ಲಿ ಸಾವಿರಾರು ಸ್ವಯಂ ಸೇವಕರು ಭಾಗಿಯಾಗಿದ್ದರು…..