Breaking News

ಆಸ್ಪತ್ರೆಯಲ್ಲಿ ಡಿಕೆಶಿಗೆ ಚಿಕಿತ್ಸೆ ಮುಂದುವರಿಕೆ..!!

ಇಂದು ಇಡಿಯಿಂದ ಜಾಮೀನು ಆಕ್ಷೇಪಣೆ....

SHARE......LIKE......COMMENT......

ರಾಜ್ಯ ಸುದ್ದಿ:

ಮಾಜಿ ಸಚಿವ ಡಿಕೆಶಿ ಅನಾರೋಗ್ಯದಿಂದಾಗಿ ದೆಹಲಿಯ ಆರ್​ಎಂಎಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೈಬಿಪಿ, ಜ್ವರ ಹಾಗೂ ರಕ್ತದೊತ್ತಡದಿಂದ ಬಳಲುತ್ತಿರೋ ಡಿಕೆಶಿಗೆ RML​ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.ಇಡಿ ಅಧಿಕಾರಿಗಳ ಮಾನಸಿಕ ಕಿರುಕುಳದಿಂದ ಡಿಕೆಶಿಯವರ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ.ನಿದ್ದೆ ಕೊರತೆ, ವಿಚಾರಣೆಯ ಒತ್ತಡದಿಂದ ಆರೋಗ್ಯದಲ್ಲಿ ಏರಿಳಿತ ಆಗುತ್ತಿದೆ ಎಂದು ಡಿಕೆ ಶಿವಕುಮಾರ್ ಆಪ್ತರು ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೋರ್ಟ್​ ಡಿಕೆಶಿ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಸೂಚಿಸಿದ್ದರಿಂದ ಇಡಿ ಅಧಿಕಾರಿಗಳು ಡಿಕೆಶಿ ಆರೋಗ್ಯ ಚೇತರಿಕೆಗೆ ಮೊದಲ ಆದ್ಯತೆ ನೀಡಿದ್ದಾರೆ.ಮತ್ತೊಂದೆಡೆ ನಾಳೆ ಡಿಕೆಶಿ ಇಡಿ ಕಸ್ಟಡಿ ಅವಧಿ ಅಂತ್ಯವಾಗಲಿದೆ. ವಿಶೇಷ ಕೋರ್ಟ್​ಗೆ ಇಡಿ ಅಧಿಕಾರಿಗಳು ಜಾಮೀನು ಕುರಿತು ಇಂದು ಆಕ್ಷೇಪಣೆ ಸಲ್ಲಿಸಬೇಕಿದೆ. ನಾಳೆ ಕೋರ್ಟ್​ ಮುಂದೆ ಹಾಜರುಪಡಿಸುವ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದಿಲ್ಲಿಗೆ ಬರಬಾರದು ಎಂದು ಸಂಸದ ಡಿ.ಕೆ.ಸುರೇಶ್‌ ಮನವಿ ಮಾಡಿದ್ದಾರೆ……