ರಾಜ್ಯ ಸುದ್ದಿ:
ಕಳೆದ 2 ತಿಂಗಳಿಂದ ಗಗನಕ್ಕೇರಿದ ಈರುಳ್ಳಿ ದರ ಈಗ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.ಮಧ್ಯಮ ಗುಣಮಟ್ಟದ ಈರುಳ್ಳಿ 40 ರಿಂದ 60 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಕಡಿಮೆ ಗುಣಮಟ್ಟದ ಈರುಳ್ಳಿ 1 ಕೆಜಿಗೆ 30 ರಿಂದ 40 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ. ದಾಖಲೆ ಮಟ್ಟಕ್ಕೇರಿದ್ದ ಈರುಳ್ಳಿ ಬೆಲೆ ದಿಢೀರ್ ಇಳಿಕೆಯಾದ್ದರಿಂದ ಗ್ರಾಹಕರು ನಿರಾಳವಾಗಿದ್ದಾರೆ.