ಬೆಂಗಳೂರು:
ಬಿಜೆಪಿ ಸಂಪರ್ಕದಲ್ಲಿ 15 ಜನ “ಕೈ” ಶಾಸಕರು.. 24ಗಂಟೇಲಿ ಸರ್ಕಾರ ಪತನ ಫಿಕ್ಸ್ ಎಂದು ಉಮೇಶ್ ಕತ್ತಿ ಮಾತಿಗೆ ಗುಂಡೂರಾವ್ ಸಖತ್ ಟಾಂಗ್ ಕೊಟ್ಟಿದ್ದಾರೆ, 24ಗಂಟೆಯಲ್ಲಿ ಸರ್ಕಾರ ಬೀಳುತ್ತೆ, ಹಾಗಾಗುತ್ತೆ ಹೀಗಾಗುತ್ತೆ ಅಂತ ಉಮೇಶ್ ಕತ್ತಿಯವರು ಬಾಯಿಗೆ ಬಂದಂತೆ ಮಾತನಾಡಬಾರದು. ಒಂದು ವೇಳೆ 24ಗಂಟೆಯಲ್ಲಿ ಸರ್ಕಾರ ಬಿದ್ದು ಹೋಗದಿದ್ದರೆ ಉಮೇಶ್ ಕತ್ತಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನಿಡಿದ್ದಾರೆ.
ಹಿರಿಯ ಶಾಸಕರು ಹೀಗೆ ಹುಚ್ಚು, ಹುಚ್ಚಾಗಿ ಮಾತನಾಡಬಾರದು. ಮಾತು ಉಳಿಸಿಕೊಳ್ಳದಿದ್ದರೆ ಮೊದಲು ಉಮೇಶ್ ಕತ್ತಿ ರಾಜೀನಾಮೆ ಕೊಡುತ್ತಾರಾ ಎಂದು ದಿನೇಶ್ ಗುಂಡೂರಾವ್ ಒಪನ್ ಚಾಲೆಂಜ್ ಮಾಡಿದ್ದಾರೆ…..