ಬೆಂಗಳೂರು:
ಐಟಿಸಿಟಿ ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಮಾರಾಟ ಜಾಲ ಆ್ಯಕ್ಟೀವ್ ಆಗಿರೋದು ಪತ್ತೆಯಾಗಿದೆ. ಹೆಮ್ಮಿಗೆಪುರದ ರುಫ್ಲೆಕ್ಸ್ ಲೇಔಟ್ನ ಮನೆಯೊಂದರ ಮೇಲೆ ಮಾದಕ ವಸ್ತು ನಿಗ್ರಹ ದಳ ರೇಡ್ ನಡೆಸಿ 27 ಕೆ.ಜಿ ಕೆಟಮಿನ್ ಡ್ರಗ್ಸ್ ವಶಕ್ಕೆ ಪಡೆದಿದೆ. ಅಡುಗೆ ಕೊಣೆಯಲ್ಲೇ ಕೆಜಿಗಟ್ಟಲೆ ಮಾದಕ ವಸ್ತುಗಳ ಸಂಗ್ರಹಿಸಿ ವಾಸನೆ ಬರದಂತೆ ಪ್ರತ್ಯೇಕ ಫ್ಯಾನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ದೇ, ಬೆಳಗಿನ ಜಾವದ ಸಮಯದಲ್ಲಿ ಡ್ರಗ್ಸ್ ಪಾರ್ಸಲ್ ಮಾಡ್ತಿದ್ರು. ಈ ಪ್ರಕರಣದಲ್ಲಿ ಮಂಗಳೂರು ಮೂಲದ ಕುಟುಂಬವನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗ್ತಿದೆ. ತನಿಖಾ ದೃಷ್ಠಿಯಿಂದ ಆರೋಪಿಗಳ ಹೆಸ್ರನ್ನು ಎನ್ಸಿಬಿ ಗೌಪ್ಯವಾಗಿಟ್ಟಿದೆ. ರೇಡ್ಗೆ ಕೆಂಗೇರಿ ಪೊಲೀಸರು ಸಾಥ್ ನೀಡಿದ್ದರು. ಬೆಂಗಳೂರು, ಹೈದರಾಬಾದ್ ಸೇರಿ ದೇಶಾದ್ಯಂತ 6 ಕಡೆ ಏಕಕಾಲಕ್ಕೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ……