ಬೆಂಗಳೂರು:
ಮೋಸ್ಟ್ ಅವೇಟೆಡ್ ಒಡೆಯ ಆಲ್ಬಮ್ನ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಚಿತ್ರದಲ್ಲಿ ನಾಯಕ ಗಜೇಂದ್ರನನ್ನು ಹಾಡಿ ಹೊಗಳುವ ಸಾಂಗಿದು. ಖಡಕ್ ಸ್ಟಿಲ್ಗಳನ್ನು ಮಾಂಟೇಜ್ ಮಾಡಿ ‘ಹೇ ಒಡೆಯಾ, ಬಾ ಒಡೆಯಾ’ ಎನ್ನೋ ಸೌಂಡಿಂಗ್ ಲಿರಿಕಲ್ ವೀಡಿಯೋ ಸಾಂಗ್ನ ರಿಲೀಸ್ ಮಾಡಿದೆ ಚಿತ್ರತಂಡ. ಪರಿಚಯದ ಸಾಂಗ್ನಲ್ಲಿ ಒಡೆಯ ಆರ್ಭಟ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಹೇ ಒಡೆಯಾ ಬಾ ಒಡೆಯಾ’ ಅಂತ ಕೂಗಿ ಕೂಗಿ ಕರೆಯುತ್ತಿದ್ದಾರೆ. ಡಿ ಹಾರ್ಟ್ ಕೂಗಿಗೆ ಓಗೊಟ್ಟು ಬಂದಿರೋ ಒಡೆಯ, ದರ್ಬಾರ್ ಶುರು ಮಾಡಿದ್ದಾನೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಊರಿನ ಘನತೆವತ್ತ ನಾಯಕನಾಗಿ ಬಣ್ಣ ಹಚ್ಚಿರುವ ಸಿನಿಮಾ ಒಡೆಯ. ಆ ಊರಿಗೆ ಇವನ ಮಾತೇ ವೇದವಾಕ್ಯ. ಒಡೆಯನ ಗತ್ತು, ಗೈರತ್ತು ಎಂಥದ್ದು ಅನ್ನುವುದನ್ನು ಈ ಹಾಡಿನಲ್ಲಿ ಬಣ್ಣಿಸಲಾಗಿದೆ.
ಒಡೆಯ ಸಿನಿಮಾದಲ್ಲಿ ಗಜೇಂದ್ರ ಬ್ರದರ್ಸ್ ಟ್ರೇಡರ್ಸ್ ಅಂಡ್ ಟ್ರಾನ್ಸ್ಪೋರ್ಟ್ ಮಾಲೀಕನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ನಾಲ್ಕು ಜನ ಸಹೋದರರ ನೆಚ್ಚಿನ ಅಣ್ಣನಾಗಿ ಒಡೆಯ ದರ್ಬಾರ್ ಮಾಡಲು ಬರ್ತಿದ್ದಾರೆ. ಟೀಸರ್ ಮತ್ತು ಟೈಟಲ್ ಸಾಂಗ್ನಿಂದ ಒಡೆಯ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಒಡೆಯ ಸಿನಿಮಾ ಡಿಸೆಂಬರ್ನಲ್ಲಿ ಪ್ರೇಕ್ಷಕರ ಎದುರಿಗೆ ಬರಲಿದೆ……