Breaking News

ಕನ್ನಡ- ತೆಲುಗು ನಡುವೆ ಭಾಷಾ ಸಂಘರ್ಷ ನಡೆದಿಲ್ಲ..!

ಆಂಧ್ರ ಪ್ರದೇಶದ ಮಡಕಶಿರಾ ಶಾಸಕ ಈರಣ್ಣ ಹೇಳಿಕೆ....

FILE
SHARE......LIKE......COMMENT......

ಗೌರಿಬಿದನೂರು:

ಕನ್ನಡ ಮತ್ತು ತೆಲುಗು ಭಾಷಿಕರ ನಡುವಿನ ಬಾಂಧವ್ಯಕ್ಕೆ ಸಾವಿರಾರೂ ವರ್ಷಗಳ ಇತಿಹಾಸವಿದೆ. ಕನ್ನಡ ಮತ್ತು ತೆಲುಗು ಭಾಷಿಕರ ನಡುವೆ ಯಾವುದೇ ಭಾಷಾ ಸಂಘರ್ಷ ನಡೆದಿಲ್ಲ ಎಂದು ಆಂಧ್ರ ಪ್ರದೇಶದ ಮಡಕಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಈರಣ್ಣ ತಿಳಿಸಿದರು.

ನಗರದ ಕೋಟೆಯಲ್ಲಿ ದಸರಾ ವಿನಾಯಕ ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅವರು ಮಾತನಾಡಿ, ನನ್ನ ಮತಕ್ಷೇತ್ರ ಮಡಕಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನ್ನಡಿಗರೇ ಬಹುಸಂಖ್ಯಾತರಾಗಿದ್ದಾರೆ.

ಆದರೂ ಇದುವರೆಗೂ ಕನ್ನಡ ಮತ್ತು ತೆಲುಗು ಭಾಷಿಕರ ನಡುವೆ ಯಾವುದೇ ರೀತಿಯ ಭಾಷಾ ಸಂಘರ್ಷ ನಡೆದಿಲ್ಲ. ಇದರಿಂದಲೇ ತೆಲುಗು ಮತ್ತು ಕನ್ನಡಿಗರ ಭಾತೃತ್ವದ ಬಂಧನ ಎದ್ದು ಕಾಣುತ್ತದೆ. ಇದರನ್ನು ಅರಿಯಬೇಕಾಗಿದೆ ಎಂದರು…..