Breaking News

ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ..!

ರಾಷ್ಟ್ರಪತಿ ಭವನದಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿ ಸಮಾರಂಭ..!

SHARE......LIKE......COMMENT......

ದೆಹಲಿ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ನೀಡಿ ಗೌರವಿಸಿದ್ರು. ರಾಜ್ಯದ ವಿಜ್ಞಾನಿ ರೋಹಿಣಿ ಗೋಡ್ಬೋಲೆ, ಸಂಗೀತ ವಿದ್ವಾಂಸ ಪಂ.ರಾಜೀವ್ ತಾರಾನಾಥ್, ಸಾಲುಮರದ ತಿಮ್ಮಕ್ಕ, ಪ್ರಾಚ್ಯ ಶಾಸ್ತ್ರಜ್ಞರಾದ ಶಾರದಾ ಶ್ರೀನಿವಾಸನ್, ಕಲಾವಿದ ಪ್ರಭುದೇವರಿಗೆ ಪದ್ಮಶ್ರೀ ಲಭಿಸಿದೆ.

ಈ ಬಾರಿ ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ.ಇನ್ನು, ಬಹುಭಾಷಾ ಸಂಗೀತ ನಿರ್ದೇಶಕ ಹಾಗೂ ಹಿನ್ನೆಲೆ ಗಾಯಕ ಶಂಕರ್ ಮಹದೇವಗನ್​ಗೂ ಪದ್ಮ ಶ್ರೀ ಪ್ರಶಸ್ತಿ ಸಿಕ್ಕಿದೆ. ಇದಲ್ಲದೇ, ಮಲೆಯಾಳಂನ ಅತ್ಯುನ್ನತ ನಟ ಮೋಹನ್​ಲಾಲ್​ಗೆ ಪದ್ಮ ಭೂಷಣ್ ಪ್ರಶಸ್ತಿ ಲಭಿಸಿದೆ……