ಬೆಂಗಳೂರು:
ಅಧಿಕಾರವಿಲ್ಲದೇ ಕಾಂಗ್ರೆಸ್ಗೆ ಇರಲಾಗುತ್ತಿಲ್ಲ. ಅವರು ಅಧಿಕಾರದ ದಾಸರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ಸುಖಾ ಸುಮ್ಮನೆ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಾ ಜನರನ್ನು ತಪ್ಪು ದಾರಿಗೆ ಎಳೀತಿದೆ ಅಂತಾ ಕಾಂಗ್ರೆಸ್ ವಿರುದ್ಧ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ 4 ವರ್ಷ ಸ್ವಚ್ಛ ಆಡಳಿತ ನೀಡಿದೆ. ನಮ್ಮ ಅಭಿವೃದ್ದಿ ಕಾರ್ಯಕ್ರಮಗಳೇ ನಮಗೆ ಶ್ರೀರಕ್ಷೆ ಅಂತಾ ಅಭಿಪ್ರಾಯಪಟ್ರು.
ಇದೇ ವೇಳೆ, ಸರ್ಜಿಕಲ್ ಸ್ಟ್ರೈಕ್ ನಮ್ಮ ಸೈನ್ಯದ ತಾಕತ್ತು. ಸರ್ಜಿಕಲ್ ಸ್ಟ್ರೈಕ್ ನಡೆದು 2 ವರ್ಷ ಸಂದಿದೆ. ಅದರ ಪರವಾಗಿ ಪರಾಕ್ರಮ ಪರ್ವ ನಡೆಯುತ್ತಿದೆ. ಆದರೆ ರಫೇಲ್ ಡೀಲ್ ಬಗ್ಗೆ ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ. ರಫೇಲ್ ಇನ್ನೂ ತಯಾರಿಯ ಹಂತದಲ್ಲಿದೆ. ಅದನ್ನೂ ಕಾಂಗ್ರೆಸ್ ಬೋಗಸ್ ಅನ್ನುತ್ತಿದೆ. ಎಚ್ ಎ ಎಲ್ ಜೊತೆ ಕಾಂಗ್ರೆಸ್ ಕೂಡ ಯಾವುದೇ ಒಡಂಬಡಿಕೆ ಮಾಡಿಕೊಂಡಿಲ್ಲ. ಆ ರೀತಿಯ ಯಾವುದೇ ಒಪ್ಪಂದಗಳಿಲ್ಲ. ಹೀಗಿರುವಾಗ ನಮ್ಮ ಮೇಲೆ ಆರೋಪ ಹೊರಿಸೋದು ಎಷ್ಟು ಸರಿ ಅಂತಾ ಪ್ರಶ್ನಿಸಿದರು.
ಮೇಯರ್ ಚುನಾವಣೆಗೆ ಗೈರಾದ ಕುರಿತು ಮಾತನಾಡಿದ ಅವರು, ನಾನು ಮೊದಲೇ ನನ್ನ ಗೈರನ್ನು ನಾಯಕರಿಗೆ ತಿಳಿಸಿದ್ದೆ. ನನ್ನಿಂದಾಗಿ ಸೋಲಾಗಿದ್ದಲ್ಲ. ಒಂದೊಮ್ಮೆ ಸೋಲಿಗೆ ನಾನೇ ಕಾರಣವಾದರೆ ನಾಯಕರ ಜೊತೆ ನಾನು ಮಾತನಾಡುತ್ತೇನೆ ಅಂತಾ ಹೇಳಿದರು…..