Breaking News

ಮಹಾಬಲೇಶ್ವರ ಮಂದಿರದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ..!

ಸರ್ಕಾರದ ಸುಪರ್ದಿಯ ಮೊದಲ ಎಣಿಕೆ...

SHARE......LIKE......COMMENT......

ಗೋಕರ್ಣ:

ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರ ಆಡಳಿತ ಸರ್ಕಾರದ ಸುಪರ್ದಿಗೆ ಹೋದ ನಂತರ ಮೊದಲ ಬಾರಿಗೆ ಮಂದಿರದ ಹುಂಡಿಗಳಲ್ಲಿ ಸಂಗ್ರವಾಗಿರುವ ಕಾಣಿಕೆ ಹಣದ ಎಣಿಕೆ ಕಾರ್ಯ ಆಡಳಿತಾಧಿಕಾರಿ ಎಚ್.ಹಾಲಪ್ಪ ನೇತೃತ್ವದಲ್ಲಿ ಸೋಮವಾರ ನಡೆಯಿತು.ಒಟ್ಟು 12,89,080ರೂ. ಹುಂಡಿಯಲ್ಲಿ ದೊರೆತಿದೆ.

ಮಂದಿರದಲ್ಲಿ ಪ್ರತಿ ನಿತ್ಯ ಯಾತ್ರಿಕರಿಗೆ ಪೂಜೆ ಮಾಡಿಸುವ ಉಪಾಧಿವಂತರಿಗೆ ಬಾಕಿ ಇರುವ 3,89,000ರೂ. ಸಂಭಾವನೆಯನ್ನು ಸೋಮವಾರ ವಿತರಿಸಲಾಯಿತು.ಇದರೊಂದಿಗೆ ಮಂದಿರದ ವತಿಯಿಂದ ಸಂಬಂಧಿಸಿದ ಎಲ್ಲರಿಗೆ ಬಾಕಿ ಇಡಲಾಗಿದ್ದ ಹಣವನ್ನು ಸಂಪೂರ್ಣವಾಗಿ ಸಂದಾಯ ಮಾಡಲಾಗಿದ್ದು ಜೊತೆಗೆ 9ಲಕ್ಷ ರೂ. ಹಣ ಮಂದಿರದ ಖಾತೆಯಲ್ಲಿ ಜಮಾ ಆಗಿದೆ ಎಂದು ಹಾಲಪ್ಪ ತಿಳಿಸಿದ್ದಾರೆ.

ಇದೇ ವೇಳೆ ಇಲ್ಲಿನ ವೇ.ಚಿಂತಾಮಣಿ ಉಪಾಧ್ಯ ಅವರ ನೇತೃತ್ವದಲ್ಲಿ ಕೆಲವು ಉಪಾಧಿವಂತರು ಆಡಳಿತಾಧಿಕಾರಿಗಳಿಗೆ ದೂರು ನೀಡಿ ಮಂದಿರದಲ್ಲಿ ಪೂಜೆ ಮಾಡಿಸುವ ಕೆಲವರು ಅತ್ಯಂತ ಕಡಿಮೆ ಮೌಲ್ಯದ ರಿಸೀಟ್ ಮಾಡಿಸಿ ಹೆಚ್ಚಿನ ಹಣವನ್ನು ಯಾತ್ರಿಕರಿಂದ ವಸೂಲಿ ಮಾಡುತ್ತಿದ್ದಾರೆ. ಈ ಮೂಲಕ ಅವರು ದೇಗುಲ ಮತ್ತು ಸರ್ಕಾರವನ್ನು ವಂಚಿಸುತ್ತಿದ್ದಾರೆ ಎಂದು ಆಪಾದಿಸಿದರು. ಈ ಬಗ್ಗೆ ಮಾತನಾಡಿದ ಆಡಳಿತಾಧಿಕಾರಿ ಈ ದೂರಿನ ಬಗ್ಗೆ ಈಗಾಗಲೇವಿವರ ಪಡೆಯಲಾಗಿದೆ. ಇಂತಹ ಅಕ್ರಮ ತಡೆಯಲು ಮಂದಿರದಲ್ಲಿ ಎಚ್ಚರಿಕೆಯ ಫಲಕ ಹಾಕಲಾಗುವುದು. ಆದಾಗ್ಯೂ ಇದು ಮುಂದುವರಿದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನಾತ್ಮಕವಾಗಿ ಕ್ರಮ ಜರುಗಿಸಲು ಯೋಚಿಸಲಾಗುವುದು ಎಂದರು……