ಮೈಸೂರು:
ಸುಳ್ವಾಡಿ ಮಾರಮ್ಮ ವಿಷ ಪ್ರಸಾದ ದುರಂತ ಇಲ್ಲಿವರೆಗೂ17 ಮಂದಿಯನ್ನು ಅಫೋಷನ ತೆಗೆದುಕೊಂಡಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರು ದಿನಕ್ಕೊಬ್ಬರಂತೆ ಸಾವಿಗೀಡಾಗ್ತಿದ್ದಾರೆ. ಇನ್ನು ಹಲವರ ಸ್ಥಿತಿ ಗಂಭೀರವಾಗಿಯೇ ಇದೆ.
ಪ್ರಸಾದ ತಿಂದು ಮೈಸೂರಿನ ಸುಯೋಗ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ರಂಗನ್ ಇಂದು ಸಾವನ್ನಪ್ಪಿದ್ದಾರೆ.ರಂಗನ್ಗೆ ಇಬ್ಬರು ಹೆಣ್ಣು ಮಕ್ಕಳಿದ್ರು. ರಂಗನ್ ಹೆಂಡತಿ, ಮಗು ಕೂಡಾ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್ಸ 14ರಂದು ರಂಗನ್ ಮಾರ್ಗ ಮಧ್ಯೆ ಇದ್ದ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಕಾಡಿಗೆ ಹೋಗಿದ್ರು. ಗ್ರಾಮದ ಜನತೆ ಅಸ್ವಸ್ಥರಾಗ್ತಿದ್ದಂತೆ ಕುಟುಂಬಸ್ಥರು ರಂಗನ್ರನ್ನು ಕಾಡಿಂದ ಕರೆಸಿಕೊಂಡು ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ರಂಗನ್ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಇನ್ನು ದುರಂತಕ್ಕೆ ಕಾರಣರಾದ ಸಾಲೂರು ಮಠದ ಇಮ್ಮಡಿ ಮಹದೇವ ಸ್ವಾಮಿ, ಮಾರಮ್ಮ ದೇವಾಲಯದ ಮ್ಯಾನೇಜರ್ ಮಾದೇಶ ಹಾಗೂ ಈತನ ಪತ್ನಿ ಅಂಬಿಕಾ ಹಾಗೂ ಅರ್ಚಕ ದೊಡ್ಡಯ್ಯ ಅವರನ್ನು ನಿನ್ನೆ ಮಧ್ಯರಾತ್ರಿ ಕೊಳ್ಳೇಗಾಲ ನ್ಯಾಯಾಧೀಶರ ಎದುರು ಹಾಜರುಪಡಿಸಿಲಾಗಿತ್ತು. ನ್ಯಾಯಾಧೀಶರು ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆ ಇಂದು ಮುಂಜಾನೆ ನಾಲ್ವರನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ತರಲಾಯಿತು……..