ಯೋಗ:
ಕಿಟಕಿಯ ಪಕ್ಕದಲ್ಲಿ ಎರಡೂ ಪಾದಗಳನ್ನು ಸೇರಿಸಿ ಸಮಸ್ಥಿತಿಯಲ್ಲಿ ನಿಂತುಕೊಳ್ಳಬೇಕು. ಪಾದ ಹಾಗೂ ಗೋಡೆಯ ಮಧ್ಯದ ಅಂತರ ಒಂದು ಅಡಿಯಷ್ಟಿರಲಿ. ಈಗ ಎಡ ಹಸ್ತವನ್ನು ಕಿಟಕಿಯ ಕೆಳಭಾಗದ ಗೋಡೆಯ ಅಂಚಿನ ಮೇಲೆ ಊರಿ ಬಲಗೈಯಿಂದ ಕಿಟಕಿಯ ಸರಳನ್ನು ಹಿಡಿದು ಬಲ ಪಕ್ಕೆಲುಬಿನ ಭಾಗವನ್ನು ಹಿಗ್ಗಿಸಬೇಕು.
ಹಾಗೆಯೇ ಎಡ ಪಕ್ಕೆಲುಬನ್ನು ಹೊರಕ್ಕೆ ತಳ್ಳುತ್ತಿರಬೇಕು ಮತ್ತು ಕೆಳಗೆ ಕುಸಿಯದಂತೆ ಮೇಲೆ ಎತ್ತಬೇಕು. ದೃಷ್ಟಿ ಮೇಲ್ಮುಖವಾಗಿರಲಿ. ಎರಡೂ ಮಂಡಿಗಳು ಬಿಗಿಯಾಗಿರಲಿ. ಈ ಆಸನದಲ್ಲಿ ಸಹಜ ಉಸಿರಾಟ ಕ್ರಿಯೆ ಇರಲಿ. ಈ ರೀತಿ ಸ್ವಲ್ಪ ಸಮಯವಿದ್ದು ವಾಪಸ್ ಬಂದ ನಂತರ ಇದೇ ರೀತಿ ಮತ್ತೊಂದು ಕಡೆ ಆಸನ ಮುಂದುವರಿಸಬೇಕು.
ಉಪಯೋಗ : ಅರ್ಧಕಟಿಚಕ್ರಾಸನದಲ್ಲಿ ಯಾವ ಕಡೆಗೆ ಬಾಗುತ್ತೇವೆಯೋ ಆ ಭಾಗ ಕುಸಿಯುವುದು ಸಾಮಾನ್ಯವಾಗಿರುತ್ತದೆ ಆದರೆ ಈ ರೀತಿ ಕಿಟಕಿಯ ಸಹಾಯದಿಂದ ಮಾಡಿದಾಗ ಆ ಸಮಸ್ಯೆ ದೂರವಾಗುತ್ತದೆ. ಪಕ್ಕೆಲುಬುಗಳಲ್ಲಿನ ಕೊಬ್ಬಿನಂಶ ಕರಗಿ ಶರೀರವು ಸುಂದರವಾಗಿ, ನೀಳಕಾಯವಾಗಿ ಕಾಣುವುದು ಮತ್ತು ಸೊಂಟದ ಭಾಗ ಬಲಿಷ್ಠವಾಗುವುದು…….