ಬೆಂಗಳೂರು:
ಬೆಂಗಳೂರಿನ ಲಗ್ಗೆರೆಯಲ್ಲಿ ಕೆಮಿಕಲ್ ಫ್ಯಾಕ್ಟರಿಯ ಗೋಡೌನ್ ಧಗಧಗನೆ ಹೊತ್ತಿ ಉರಿದಿದೆ. ಎಂಇಐ ಕಾಲೋನಿಯ ಶ್ರೀಗಣೇಶ ಕೆಮಿಕಲ್ಸ್ ಕಂಪನಿಯ ಗೋಡೌನ್ನಲ್ಲಿದ್ದ ಸುಮಾರು15 ಲಕ್ಷ ಮೌಲ್ಯದ ಕೆಮಿಕಲ್ಸ್ ಹಾನಿಯಾಗಿದೆ. ರಾತ್ರಿ ಹತ್ತು ಗಂಟೆ ಸುಮಾರಿಗೆ ಕಾರ್ಮಿಕರ ಚೀರಾಟ ಕೇಳಿ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಬೆಂಕಿ ನಂದಿಸುವ ವೇಳೆ ಭಾರೀ ಸ್ಫೋಟದ ಸದ್ದು ಕೇಳಿ ಬಂದು ಬೆಂಕಿ ಇನ್ನಷ್ಟು ವ್ಯಾಪಿಸಿತ್ತು. ಆರು ಅಗ್ನಿ ಶಾಮಕ ವಾಹನಗಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ಗೋಡೌನ್ನಲ್ಲಿದ್ದ ಕಾರ್ಮಿಕ ಶ್ರೀನಿವಾಸ್ ಸೇರಿ ನಾಲ್ವರು ಪಾರಾಗಿದ್ದಾರೆ…..