ಜಾಬ್ & ಎಜುಕೇಷನ್:
ಕೆಲಸ ಹುಡುಕಾಟ ನಡೆಸುವವರ ‘ಸರ್ಚ್’ ಇನ್ನಷ್ಟು ಸುಲಭವಾಗಲಿದೆ. ಭಾರತದ ಉದ್ಯೋಗಾರ್ಥಿಗಳು ಇನ್ಮುಂದೆ ಗೂಗಲ್ ಜಾಬ್ ಸರ್ಚ್ ಮೂಲಕ ಸುಲಭವಾಗಿ ತಮ್ಮ ಆಯ್ಕೆಯ ಉದ್ಯೋಗ ಹುಡುಕಬಹುದಾಗಿದೆ.
ಉದ್ಯೋಗ ಮಾಹಿತಿ ಪಟ್ಟಿಯನ್ನು ನೀಡಲು ಗೂಗಲ್ ಸಂಸ್ಥೆಯು, ಐಬಿಎಂ ಟ್ಯಾಲಂಟ್ ಮ್ಯಾನೇಜ್ ಮೆಂಟ್ ಸಲ್ಯೂಷನ್ಸ್, ಹೆಡ್ ಹೊಂಕೊಸ್, ಟೈಮ್ಸ್ ಜಾಬ್ಸ್, ವಿಸ್ಡಮ್ ಜಾಬ್ಸ್, ಫ್ರೆಷರ್ಸ್ ವರ್ಲ್ಡ್, ಲಿಂಕ್ಡಿನ್, ಕ್ವಿಕ್ವರ್ ಜಾಬ್ಸ್, ಶೈನ್.ಕಾಂ. ಟಿ-ಜಾಬ್ಸ್ ಮುಂತಾದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಗೂಗಲ್ ಸರ್ಚ್ ಇಂಜಿನ್ ನಲ್ಲಿ Job search ಎಂದು ದಾಖಲಿಸಿ, ಜಾಬ್ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.
ಗೂಗಲ್ ನಲ್ಲಿ Jobs near me, Jobs for freshers ಎಂದು ಸರ್ಚ್ ಮಾಡಿದಾಗ, ಉದ್ಯೋಗಗಳ ಮಾಹಿತಿ ಪಟ್ಟಿ ಕಾಣಸಿಗಲಿದೆ. ಯಾವುದಾದರೊಂದು ಉದ್ಯೋಗದ ಮೇಲೆ ಕ್ಲಿಕ್ ಮಾಡಿದಲ್ಲಿ ಆ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ನಿಮ್ಮ ಆಯ್ಕೆಯ ಉದ್ಯೋಗ ಮಾಹಿತಿ ಅಲರ್ಟ್ ಪಡೆಯಬಹುದು, ಹಂಚಿಕೊಳ್ಳಬಹುದು. ಸದ್ಯಕ್ಕೆ ಈ ಎಲ್ಲಾ ಮಾಹಿತಿ ಇಂಗ್ಲೀಷ್ ನಲ್ಲಿ ಮಾತ್ರವಿದೆ. ಡೆಸ್ಕ್ ಟಾಪ್ ಗೂಗಲ್ ಸರ್ಚ್ ಅಲ್ಲದೆ, ಆಂಡ್ರಾಯ್ಡ್ ಹಾಗೂ ಐಒಎಸ್ ನಲ್ಲೂ ಲಭ್ಯವಿದೆ……..