ದೆಹಲಿ:
ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆ , ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿಗೆ ದೊಡ್ಡ ಶಾಕ್ ನೀಡಿವೆ. ಬಹುತೇಕ 2015ರ ಫಲಿತಾಂಶವೇ ವಿಧಾನಸಭೆ ಚುನಾವಣೆಯಲ್ಲಿ ಮರುಕಳಿಸುವ ಸಾಧ್ಯತೆ ಇದೆ. ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಕ್ಲೀನ್‌ಸ್ವೀಪ್‌ನೊಂದಿಗೆ ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲಿದೆ ಅನ್ನೋ ಸಮೀಕ್ಷೆ ಬರ್ತಿವೆ. ಎಎನ್‌ಎಸ್-ಸಿ ವೋಟರ್ ಸಮೀಕ್ಷೆ ಪ್ರಕಾರ, ಆಪ್ 59, ಬಿಜೆಪಿ 8 ಹಾಗೂ ಕಾಂಗ್ರೆಸ್ 3 ಸ್ಥಾನ ಗಳಿಸಲಿವೆ. ದಿಲ್ಲಿ ರಾಜ್ಯವನ್ನು ಗೆಲ್ಲಲು ಎರಡು ದಶಕಗಳಿಂದ ಹೋರಾಡುತ್ತಿರುವ ಬಿಜೆಪಿಗೆ, ಈ ಸಲವೂ ಯಶಸ್ಸು ಸಿಗುವುದಿಲ್ಲ ಎಂದು ಸಮೀಕ್ಷೆ ಹೇಳಿದೆ. ದಿಲ್ಲಿ ಹೊರವಲಯದ ಎಲ್ಲ 26 ಕ್ಷೇತ್ರಗಳೂ ಆಪ್ ಪಾಲಾಗಲಿವೆ. ಕೇಂದ್ರ ದಿಲ್ಲಿಯಲ್ಲಿ 17 ಮತ್ತು ಹಳೆ ದಿಲ್ಲಿಯಲ್ಲಿ 16 ಸ್ಥಾನಗಳನ್ನು ಆಪ್ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳ್ತಿವೆ. 2015ರಲ್ಲಿ ಆಮ್ ಆದ್ಮಿ ಪಕ್ಷ 67, ಬಿಜೆಪಿ 3 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು……