48ನೇ ಓವರ್ ಬೌಲಿಂಗ್ ಮಾಡಿದ ಮೊಹಮ್ಮದ್ ಅಮೀರ್ ತನ್ನ 4ನೇ ಎಸೆತ ಬೌನ್ಸರ್ ಹಾಕಿದ್ದು, ಕೊಹ್ಲಿ ಹೊಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟ್ಗೆ ತಾಗದೇ ಸಂಪೂರ್ಣ ವಿಫಲವಾಗಿ ಕೀಪರ್ ಸರ್ಫರಾಜ್ ಕೈ ಸೇರಿತು. ಈ ಸಂದರ್ಭ ಅಂಪೈರ್ ನಿರ್ಣಯಕ್ಕೂ ಕಾಯದ ಕೊಹ್ಲಿ ಕ್ರೀಡಾಸ್ಪೂರ್ತಿ ಮೆರೆಯುತ್ತ ಔಟ್ ಎಂದು ಮೈದಾನ ತೊರೆದರು. ಆದರೆ ಅಸಲಿಗೆ ಇದು ಔಟ್ ಆಗಿರಲಿಲ್ಲ. ಚೆಂಡು ಬ್ಯಾಟ್ಗೆ ತಾಗಿಯೇ ಇರಲಿಲ್ಲ. ಇದು ಅಂಪೈರ್ಗೂ ತಿಳಿದಿತ್ತು, ಹೀಗಾಗಿ ಅಂಪೈರ್ ಕೂಡ ಔಟ್ ನೀಡಲಿಲ್ಲ. ಆದರೆ, ಕೊಹ್ಲಿ ಔಟ್ ಎಂದು ತಿಳಿದು ಕ್ರೀಸ್ನಿಂದ ಹೊರ ನಡೆದರು. ಡಿಆರ್ಎಸ್ ನತ್ತವೂ ಮುಖ ಮಾಡಿಲ್ಲ. ಭಾರತದ ನಾಯಕನ ಈ ವರ್ತನೆಗೆ ಭಾರೀ ಬೆಲೆ ತೆರಬೇಕಾಯಿತು. ಅಲ್ಲದೆ ರನ್ರೇಟ್ನಲ್ಲೂ ಕುಸಿತ ಕಾಣಬೇಕಾಯಿತು……
ಕೊಹ್ಲಿ ನಾಟೌಟ್; ಅಂಪೈರ್ ಔಟ್ ನೀಡದಿದ್ದರೂ ಔಟ್.!
ಔಟ್ ಎಂದು ವಿರಾಟ್ ಮೈದಾನ ತೊರೆದ ಘಟನೆ....