Breaking News

ಖಾತೆ ಹಂಚಿಕೆ ಕೊನೆಗೂ ಫಲಿಸಿತ್ತು ಸಿದ್ದು ಸೇಡು..!?

ಪರಂ ಔಟ್... ಡಿಕೆಶಿಗೂ ಬೌಲ್ಡ್....

SHARE......LIKE......COMMENT......

ಬೆಂಗಳೂರು:

ಸಂಪುಟ ವಿಸ್ತರಣೆಯಲ್ಲಿ ಉಂಟಾಗಿದ ಖಾತೆ ಕ್ಯಾತೆ ಕೊನೆಗೂ ಶಮನವಾಗಿದೆ  ಯೆಸ್  ಖಾತೆ ಹಂಚಿಕೆಯಲ್ಲಿ ಕೊನೆಗೂ ಫಲಿಸಿತ್ತು ಸಿದ್ದು ಸೇಡು. ಹೌದು ಪರಂ ಸಂಪುಟದಿಂದ  ಔಟ್… ಡಿಕೆಶಿ ಬೌಲ್ಡ್….

ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗೃಹ ಖಾತೆಯನ್ನು ತಮ್ಮ ಆಪ್ತ ಎಂ.ಬಿ.ಪಾಟೀಲರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಸರ್ಕಾರದಲ್ಲಿ ಪ್ರಭಾವಿಯಾಗಿರುವ ಡಿ.ಕೆ. ಶಿವಕುಮಾರ್‌ ಅವರ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನೂ ಕಸಿದುಕೊಂಡಿದ್ದು ತಮ್ಮ ಇನ್ನೊಬ್ಬ ಆಪ್ತ ಇ. ತುಕಾರಾಂ ಅವರಿಗೆ ಕೊಡಿಸಿದ್ದಾರೆ. ಈ ಮೂಲಕ ಪರಮೇಶ್ವರ ಮತ್ತು ಡಿ.ಕೆ. ಶಿವಕುಮಾರ್‌ ಶಕ್ತಿಯನ್ನು ಸಿದ್ದರಾಮಯ್ಯ ಕುಗ್ಗಿಸಿದ್ದು, ಕಾಂಗ್ರೆಸ್‌ನಲ್ಲಿ ಮತ್ತೆ ಸಿದ್ದರಾಮಯ್ಯ ಕೈ ಮೇಲಾದಂತಾಗಿದೆ.

ಗೃಹ ಖಾತೆ ಬಿಟ್ಟುಕೊಡಲು ಹಿಂದೇಟು ಹಾಕಿದ್ದ ಉಪ ಮುಖ್ಯಮಂತ್ರಿ ಪರಮೇಶ್ವರ್‌ಗೆ ಮುಖಭಂಗವಾದಂತಾಗಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಬದಲಿಯಾಗಿ ಸಿಕ್ಕಿದೆ. ನಿರೀಕ್ಷೆಯಂತೆ ಪರಮೇಶ್ವರ್‌ ಅವರನ್ನು ನಿಯಂತ್ರಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ……