Breaking News

ಗಮನ ಸೆಳೆದು ಸುಲಿಗೆ ಮಾಡ್ತಿದ್ದ ಖತರ್ನಾಕ್​ ಗ್ಯಾಂಗ್​ ಅಂದರ್..

ಮಹಿಳೆಯರು ಹಾಗೂ ವೃದ್ಧೆಯರೇ ಟಾರ್ಗೆಟ್....

SHARE......LIKE......COMMENT......

ಬೆಂಗಳೂರು:

ಮಹಿಳೆಯರು ಹಾಗೂ ವೃದ್ಧೆಯರನ್ನ ಟಾರ್ಗೆಟ್ ಮಾಡಿ ಗಮನ ಬೇರೆಡೆ ಸೆಳೆದು ಸುಲಿಗೆ ಮಾಡ್ತಿದ್ದ ಖತರ್ನಾಕ್​ ಗ್ಯಾಂಗ್​ ಅಂದರ್​​ ಆಗಿದೆ. ಮೂಲತಃ ಮಳವಳ್ಳಿಯವರಾಗಿರೋ ನೇತ್ರಾವತಿ, ಶಿವರಾಜ್ ಹಾಗೂ ಪ್ರವೀಣ್,

ಈ ಗ್ಯಾಂಗ್ ನಲ್ಲಿ‌ ಮಹಿಳೆಯರೇ ಮಾಸ್ಟರ್ ಮೈಂಡ್ ಗಳಾಗಿದ್ದು‌, ನೇತ್ರಾವತಿ ಎಂಬಾಕೆ ಒಂಟಿ‌ಯಾಗಿ ನಡೆದು ಬರೋ ವೃದ್ಧರ ಮುಂದೆ ಹೋಗಿ ಹಣವಿರೋ ಪರ್ಸ್ ಬೀಳಿಸಿ ತೆಗೆದುಕೊಳ್ಳುವಂತೆ ಮಾಡ್ತಿದ್ರು. ಆ ವೇಳೆ ಹಿಂದಿನಿಂದ ಬರ್ತಿದ್ದ ಮತ್ತೊಬ್ಳು ಕಳ್ಳಿ ಪದ್ಮಾ, ನಿಮ್ಮ ಹಣವಿರಬೇಕು ನೋಡಿ ತಗೋಳಿ ಅಂತ ಮಹಿಳೆಯರ ಜೊತೆ ಮಾತಿಗೆ ಇಳಿತಿದ್ಲು. ಮೊದಲು ಹಣವಿದ್ದ ಪರ್ಸ್ ಎಸೆದಿದ್ದ ನೇತ್ರಾವತಿ ಬಂದು ನಿಮ್ಮ ಮೇಲೆ ದೂರು ನೀಡ್ತೇನೆ ನನ್ನ ಹಣವನ್ನ ನೀವೆ ತೆಗೆದುಕೊಂಡಿದ್ದಾರಾ ಅಂತ ಜಗಳ ಶುರು ಮಾಡ್ತಿದ್ಲು. ಅಷ್ಟೊತ್ತಿಗೆ ಇದೇ ಗ್ಯಾಂಗ್ ನ ಮತ್ತೊಬ್ಬ ಕಳ್ಳ ಶಿವರಾಜ್ ಬಂದು ಎಲ್ಲರನ್ನ ಸಮಾಧಾನ ಮಾಡೋ ನಾಟ್ಕ ಮಾಡ್ತಿದ್ದ. ಕಡೆಗೆ ನಿಮ್ಮ ಸರವನ್ನ ಬ್ಯಾಗ್ ನಲ್ಲಿ ಅಥವಾ ಕವರ್ ನಲ್ಲಿ ಇಟ್ಕೊಂಡು ಮನೆಗ್ ಹೋಗಿ ಅಂತಿದ್ರು. ಈ ವೇಳೆ ವೃದ್ಧ ಮಹಿಳೆಯರು ಸರ ತೆಗೆಯುವ ವೇಳೆ ಸರವನ್ನ ಕ್ಷಣಮಾತ್ರದಲ್ಲೇ ಬದಲಿಸ್ತಿದ್ರು. ನಂತರ ಇನ್ನೊಬ್ಬ ಕಳ್ಳ ಪ್ರವೀಣ್ ಆಟೋದಲ್ಲಿ ಬಂದು ಇವ್ರನ್ನ ಕರೆದೊಯ್ತಿದ್ದ. ಹೀಗೆ ಸುಲಿಗೆ ಮಾಡ್ತಿದ್ದ ಆರೋಪಿಗಳನ್ನು ಪೊಲೀಸ್ರು ಹೆಡೆಮುರಿ ಕಟ್ಟಿದ್ದಾರೆ.