ನವದೆಹಲಿ:
ಕೆಲವೇ ದಿನಗಳಲ್ಲಿ ದೆಹಲಿಯು ಗ್ಯಾಸ್ ಚೇಂಬರ್ ಆಗಲಿದೆ. ರೈತರು ಭತ್ತದ ಹುಲ್ಲನ್ನು ಸುಡುತ್ತಿರುವುದಕ್ಕೆ ಕೇಂದ್ರ ಸರ್ಕಾರ, ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಿಡಿಕಾರಿದ್ದಾರೆ.
ಕಳೆದ ವಾರದಿಂದಲೂ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಇದಕ್ಕೆ ಪ್ರಮುಖ ಕಾರಣ ನೆರೆ ರಾಜ್ಯಗಳಲ್ಲಿ ಕಟಾವು ಮಾಡಿದ ಫಸಲಿನ ಉಳಿಕೆಯನ್ನು ಸುಡುತ್ತಿರುವುದು.
ರೈತರಿಗಾಗಿ ಕೇಂದ್ರ ಸರ್ಕಾರ, ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳು ಏನನ್ನು ಮಾಡಿಲ್ಲ. ಅದರ ಪರಿಣಾಮವಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ ಮತ್ತು ದೆಹಲಿಯು ಶೀಘ್ರದಲ್ಲೇ ಗ್ಯಾಸ್ ಚೇಂಬರ್ ಆಗಿ ಮಾರ್ಪಡಲಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
V sad that Central, Punjab and Haryana Govts did absolutely nothing for the farmers. As a result, the farmers will suffer on one hand and Delhi will become a gas chamber soon. https://t.co/X3ZTU2xbC6
— Arvind Kejriwal (@ArvindKejriwal) October 19, 2018