ಮೈಸೂರು:
ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಎಸ್ಪಿಗೆ ರ್ಯಾಪ್ ಸಿಂಗರ್ ವಿವರಣೆ ಕೊಟ್ಟಿದ್ದು, ಚಂದನ್ ಶೆಟ್ಟಿಗೆ ಎಸ್ಪಿ ರಿಷ್ಯಂತ್ ವಾರ್ನಿಂಗ್ ಕೊಟ್ಟಿದ್ದಾರೆ. ಮೈಸೂರು ಎಸ್ಪಿ ಚಂದನೇ ಶೆಟ್ಟಿಗೆ ವಾರ್ನ್ ಮಾಡಿದ್ದು, ಸರ್ಕಾರಿ ಕಾರ್ಯಕ್ರಮದಿಂದ ನಿಮ್ಮನ್ನು ಬ್ಯಾನ್ ಮಾಡುತ್ತೇವೆಂದು ಹೇಳಿದ್ದಾರೆ. ಚಂದನ್ ಶೆಟ್ಟಿ ಮಾತ್ರವಲ್ಲದೇ, ಸರ್ಕಾರಿ ವೇದಿಕೆಯನ್ನ ಖಾಸಗಿ ಕ್ಷಣಕ್ಕೆ ಬಳಸಿಕೊಳ್ಳುವ ಎಲ್ಲಾ ಕಲಾವಿದರಿಗೂ ಎಚ್ಚರಿಕೆ ನೀಡಿದ್ದು, ಪ್ರಕರಣದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಡಿಸಿಗೆ ಬಿಟ್ಟಿದ್ದೇವೆ ಎಂದಿದ್ದಾರೆ. ಡಿಸಿ ಅವ್ರು ಎಲ್ಲವನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತಾರೆ…….