Breaking News

ಜನ್ ಶತಾಬ್ದಿ ಎಕ್ಸ್​ಪ್ರೆಸ್ ಎಂಜಿನ್​ನಲ್ಲಿ ದೋಷ..!

ಪ್ರಯಾಣಿಕರ ಪರದಾಟ....

FILE
SHARE......LIKE......COMMENT......

ತುಮಕೂರು:

ಜನ್ ಶತಾಬ್ದಿ ಎಕ್ಸ್​ಪ್ರೆಸ್ ರೈಲಿನ ಎಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ನಿನ್ನೆ ರಾತ್ರಿ ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಕೆಟ್ಟು ನಿಂತಿದ್ದ ಘಟನೆ ಸಂಪಿಗೆ ರೋಡ್ ಸ್ಟೇಷನ್ ಬಳಿ ನಡೆದಿದೆ.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಜನ್ ಶತಾಬ್ದಿ ಎಕ್ಸ್​ಪ್ರೆಸ್ ರೈಲಿನ ಎಂಜಿನ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಟ್ಟು ನಿಂತಿತ್ತು. ನಿನ್ನೆ ಮಧ್ಯಾಹ್ನ ಎರಡು ಗಂಟೆಗೆ ಹುಬ್ಬಳ್ಳಿಯಿಂದ ಹೊರಟಿದ್ದ ರೈಲು ರಾತ್ರಿ 9.25 ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದ್ರೆ ಒಂದುವರೆ ಗಂಟೆಗೂ ಹೆಚ್ಚು ಕಾಲ ಹಳಿ ಮೇಲೆ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ನಿಗದಿತ ಸಮಯಕ್ಕೆ ಸರಿಯಾಗಿ ಬೆಂಗಳೂರು ತಲುಪಲು ಸಾಧ್ಯವಾಗದೆ ಆತಂಕಕ್ಕೊಳಗಾಗಿದ್ದರು. ತಕ್ಷಣ ಯಶವಂತಪುರದಿಂದ ಪರ್ಯಾಯವಾಗಿ ಇಂಜಿನ್ ಕರೆಸಿಕೊಂಡ ರೈಲ್ವೆ ಅಧಿಕಾರಿಗಳು ಎಂಜಿನ್ ಬದಲಾಯಿಸಿ ಕಳುಹಿಸಿಕೊಟ್ಟಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು…..