ಜಾಬ್:
ಯಾವಾಗಲೂ ಬೆಂಕಿ ಬಿದ್ದಾಗಲೇ ಬಾವಿ ತೋಡುವ ಕೆಲಸ ಆರಂಭಿಸುತ್ತಾರೆ. ಉದ್ಯೋಗದ ವಿಚಾರದಲ್ಲೂ ಹಾಗೆಯೇ. ಓದು ಮುಗಿಯುವವರೆಗೂ ಕೆಲಸ ಹುಡುಕುವ ಬಗ್ಗೆ ಆಲೋಚನೆ ಮಾಡುವುದೇ ಇಲ್ಲ. ಓದು ಮುಗಿದಾಕ್ಷಣ ತಕ್ಷಣಕ್ಕೆ ಜಾಬ್ ಸಿಗದಿದ್ದಾಗ ಹತಾಷೆಗೊಳಗಾಗುತ್ತಾರೆ. ಅಭ್ಯರ್ಥಿಗಳು ಜಾಬ್ ಹುಡುಕುವಾಗ ಮಾಡುವ ಸಾಮಾನ್ಯ ತಪ್ಪುಗಳೇನು, ಯಾವ ಕಾರಣಕ್ಕೆ ಉದ್ಯೋಗ ಸಿಗುವುದಕ್ಕೆ ವಿಳಂಬವಾಗುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ……..
ಜಾಬ್ ಹುಡುಕುವಾಗ ಈ ತಪ್ಪುಗಳನ್ನ ಮಾಡಬೇಡಿ……
1. ಸಕಾಲದಲ್ಲಿ ಕೆಲಸ ಹುಡುಕದಿರುವುದು.
ಅಭ್ಯರ್ಥಿಗಳು ಮಾಡುವ ದೊಡ್ಡ ತಪ್ಪೇನೆಂದರೆ ಸಕಾಲದಲ್ಲಿ ಕೆಲಸ ಹುಡುಕದೆ ಇರುವುದು. ಬಹುತೇಕರು ಓದುತ್ತಿರುವಾಗಲೇ ಕೆಲಸ ಹುಡುಕಾಟದ ಕಡೆಗೆ ಗಮನ ನೀಡುವುದಿಲ್ಲ. ಇನ್ನು ಕೆಲಸದಲ್ಲಿರುವವರು ಕೆಲಸಕ್ಕೆ ಸೇರಿದ ದಿನದಿಂದ ಕೆಲಸ ಬಿಡುವುದಿಲ್ಲ ಎನ್ನುವ ಆಲೋಚನೆಯಲ್ಲಿಯೇ ಇರುತ್ತಾರೆ. ಕೆಲಸ ಬಿಡಬೇಕಾಗಿ ಬಂದಾಗ ಮತ್ತೆ ಉದ್ಯೋಗ ಪಡೆಯುವುದು ವಿಳಂಬವಾಗುತ್ತದೆ. ಹೀಗಾಗಿ ಒಂದು ಕೆಲಸಕ್ಕೆ ಸೇರಿದ 18 ತಿಂಗಳ ನಂತರ ಬೇರೆಡೆ ಕೆಲಸ ಹುಡುಕುವುದಕ್ಕೆ ಪ್ರಾರಂಭಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
2. ಆಫರ್ಗೆ ಪ್ರತಿಕ್ರಿಯಿಸದೇ ಇರುವುದು.
ಬಹುತೇಕರು ಜಾಬ್ ಪೊರ್ಟಲ್ನಲ್ಲಿ ರೆಸ್ಯೂಂ ಅಪ್ಲೋಡ್ ಮಾಡಿರುತ್ತಾರೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಬರುವ ಯಾವುದೇ ಇ-ಮೇಲ್ ಅಥವಾ ಕರೆಗಳಿಗೆ ಸ್ಪಂದಿಸುವುದಿಲ್ಲ. ಇದರಿಂದ ಉದ್ಯೋಗ ಪಡೆಯುವಲ್ಲಿ ವಿಳಂಬವಾಗುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.
3. ಕಾಟಾಚಾರಕ್ಕೆ ರೆಸ್ಯೂಂ ಕಳುಹಿಸ ಬೇಡಿ.
ಯಾವುದೇ ಕಂಪನಿಗೆ ರೆಸ್ಯೂಂ ಕಳುಹಿಸುವ ಮುನ್ನ ಅಭ್ಯರ್ಥಿಗಳು ಅಲ್ಲಿ ತಾವು ಮಾಡುವ ಕೆಲಸ ಖಾಲಿ ಇದೆಯೇ ಎನ್ನುವುದನ್ನು ತಿಳಿದುಕೊಂಡು ರೆಸ್ಯೂಂ ಕಳುಹಿಸುವುದಿಲ್ಲ. ಕೆಲಸ ಸಿಕ್ಕರೆ ಸಿಗಲಿ ಎನ್ನುವ ಉದ್ದೇಶದಿಂದ ಕಾಟಾಚಾರಕ್ಕೆ ರೆಸ್ಯೂಂ ಕಳುಹಿಸಿ ಕಾಲಹರಣ ಮಾಡುತ್ತಾರೆ. ಬಹಳಷ್ಟು ಜನರು ಮಾಡುವ ಸಾಮಾನ್ಯ ತಪ್ಪು ಇದು ಎಂದು ತಜ್ಞರು ಬೊಟ್ಟು ಮಾಡಿದ್ದಾರೆ.
4. ಸಾಮರ್ಥ್ಯ ಅರಿತು ಕೊಳ್ಳದಿರುವುದು.
ಇಂದು ಕೆಲಸ ಸಿಗುವುದು ತುಂಬ ಕಷ್ಟ. ಹೀಗಾಗಿ ಅನೇಕರು ಸಿಕ್ಕ ಕೆಲಸವನ್ನು ಒಪ್ಪಿಕೊಂಡು ಬಿಡುತ್ತಾರೆ. ಒಪ್ಪಿಕೊಂಡ ಕೆಲಸಕ್ಕೆ ಎಷ್ಟರ ಮಟ್ಟಿಗೆ ನನ್ನಿಂದ ನ್ಯಾಯ ಒದಗಿಸಲು ಸಾಧ್ಯ ಎನ್ನುವುದನ್ನು ಯೋಚಿಸಲು ಹೋಗುವುದೇ ಇಲ್ಲ. ತಮ್ಮ ಸಾಮರ್ಥ್ಯವೇನು, ಯಾವ ಹುದ್ದೆ ತಾವು ನಿರ್ವಹಿಸಬಹುದು ಎಂಬುದರ ಅರಿವಿಲ್ಲದೇ, ತಮ್ಮ ವೃತ್ತಿ ಜೀವನದಲ್ಲಿ ಅಭ್ಯರ್ಥಿಗಳು ಸಾಮಾನ್ಯವಾಗಿ ತಪ್ಪು ಮಾಡುತ್ತಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
5. ಸಂಪರ್ಕಗಳನ್ನು ಸರಿಯಾಗಿ ಬಳಸಿಕೊಳ್ಳಿ.
ಅಭ್ಯರ್ಥಿಗಳ ಸಂಪರ್ಕ ಜಾಲ ಎಷ್ಟು ದೊಡ್ಡದೊ ಅಷ್ಟು ಬೇಗ ಕೆಲಸ ಸಿಗುತ್ತದೆ. ಅಭ್ಯರ್ಥಿಗಳು ಸಂಪರ್ಕಗಳನ್ನು ಹೆಚ್ಚಿಸಿಕೊಳ್ಳಬೇಕು. ಕಾಲೇಜು ದಿನಗಳಿಂದಲೇ ಇತ್ತ ಗಮನ ನೀಡಬೇಕು……….