ಬೆಂಗಳೂರು:
ಲೋಕಸಭೆ ಚುನಾವಣೆ ಹೊತ್ತಲ್ಲೇ ಜೆಡಿಎಸ್ ಪಕ್ಷಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಶಾಕ್ ನೀಡಿದ್ದಾರೆ. ಜೆಡಿಎಸ್ ಪಕ್ಷ ತೊರೆದು ಇಂದು ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸತೀಶ್ ಚಂದ್ರ ಮಿಶ್ರಾ ಸಮ್ಮುಖದಲ್ಲಿ ಡ್ಯಾನಿಶ್ ಅಲಿ ಬಿಎಸ್ಪಿಗೆ ಸೇರಿದ್ದಾರೆ. ಅಲ್ದೇ 2019ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ಮೀರತ್ನಿಂದ ಬಿಎಸ್ಪಿ ಟಿಕೆಟ್ ಪಡೆದು ಕಣಕ್ಕಿಳಿಯಲಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡುವೆ ಡ್ಯಾನಿಶ್ ಅಲಿ ಕೊಂಡಿಯಾಗಿದ್ರು.. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಡ್ಯಾನಿಶ್ ಅಲಿ, ದೇವೇಗೌಡರ ಅನುಮತಿ ಪಡೆದು ನಾನು ಬಿಎಸ್ಪಿ ಸೇರಿದ್ದೇನೆ. ಅವರ ಆಶೀರ್ವಾದ ಸದಾ ನನ್ನ ಮೇಲಿರುತ್ತೆ ಎಂದು ತಿಳಿದ್ದಾರೆ……