Breaking News

ಡಿಎಂಕೆ ಪಕ್ಷದ ಮುಖಂಡ ರಾಧಾ ರವಿ ಅಮಾನತು..!

ನಯನತಾರಾ ಬಗ್ಗೆ ಅಶ್ಲೀಲ ಹೇಳಿಕೆ ಪ್ರಕರಣ....

SHARE......LIKE......COMMENT......

ಚೆನೈ:

ನಟಿ ನಯನತಾರಾ ಬಗ್ಗೆ ಅಶ್ಲೀಲ ಹೇಳಿಕೆ ಕೊಟ್ಟಿದ್ದ ಮುಖಂಡ ಹಾಗೂ ನಟ ರಾಧಾ ರವಿಯನ್ನು ಡಿಎಂಕೆ ಪಕ್ಷದಿಂದಲೇ ಅಮಾನತು ಮಾಡಿದೆ. ಇತ್ತೀಚೆಗೆ ಟ್ರೇಲರ್​​​ ಬಿಡುಗಡೆ ಸಮಾರಂಭದಲ್ಲಿ ಮಾತ್ನಾಡಿದ್ದ ರಾಧಾರವಿ, ನಯನತಾರಾ ದೆವ್ವದ ಪಾತ್ರವನ್ನು ಮಾಡ್ತಾರೆ..ದೇವರ ಪಾತ್ರಗಳಲ್ಲೂ ಪಾತ್ರ ಮಾಡ್ತಾರೆ.. ಸೀತೆಯ ಪಾತ್ರದಲ್ಲೂ ಆಕೆ ನಟನೆ ಮಾಡ್ತಾಳೆ..ಇವತ್ತು ಯಾರು ಬೇಕಾದ್ರೂ..ಎಂಥವರು ಬೇಕಾದ್ರೂ ದೇವರ ಪಾತ್ರ ಮಾಡುವ ಸನ್ನಿವೇಶ ಬಂದಿದೆ ಎಂದು ಹೇಳಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು……