Breaking News

ದೇವರ ಪ್ರಸಾದದಲ್ಲಿ ವಿಷ..!

ಐಸಿಯುನಲ್ಲಿ 66 ಮಂದಿ....

SHARE......LIKE......COMMENT......

ಚಾಮರಾಜನಗರ/ಮೈಸೂರು: 

ಹನೂರು ಬಳಿಯ ಸುಳುವಾಡಿಯ ದೇಗುಲದ ಪ್ರಸಾದದಲ್ಲಿ ವಿಷ ಸೇರಿದ್ದು ಹೇಗೆ ಎಂದು ಸದ್ಯಕ್ಕೆ ಎಲ್ಲೆಡೆ ಚರ್ಚೆಯಾಗುತ್ತಿದೆ.ಇನ್ನು ಘಟನೆ ನಡೆದ ಸುಳುವಾಡಿ ದೇಗುಲದ ಸುತ್ತಮುತ್ತಲಿನ ಗ್ರಾಮಗಳಲ್ಲಿ ದುಃಖ ಮಡುಗಟ್ಟಿದೆ. ಸಾವಿಗೀಡಾದ 11 ಮಂದಿಯ ಶವಗಳನ್ನು ಶವಪರೀಕ್ಷೆ ನಂತರ ಅವರವರ ಗ್ರಾಮಗಳಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 76 ಮಂದಿ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಅಸ್ವಸ್ಥಗೊಂಡಿದ್ದ 79 ಮಂದಿಯನ್ನು ಮೈಸೂರಿಗೆ ಕರೆತರಲಾಗಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಏಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದೇಗುಲದಲ್ಲಿನ ಪ್ರಸಾದ ಖಾಲಿಯಾಗಿದ್ದರಿಂದ 30 ಮಂದಿ ಓಂ ಶಕ್ತಿ ಮಾಲಾಧಾರಿಗಳು ಅಪಾಯದಿಂದ ಪಾರಾಗಿದ್ದಾರೆ.

ಚಾಮರಾಜನಗರದ ಕಿಚ್ಚುಗತ್ತಿ‌ ಮಾರಮ್ಮ ದೇವಸ್ಥಾನ‌ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ  ಚುರುಕುಗೊಂಡಿದೆ. ಮೈಸೂರಿನ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ವಾಮಿಟ್(ವಾಂತಿ) ಮಾದರಿ ಸಂಗ್ರಹಿಸಲಾಗಿದೆ.ಕೊಳ್ಳೇಗಾಲ ರೋಗಿಗಳ ವಾಂತಿ ಸಂಗ್ರಹಿಸಿಕೊಂಡ ಪೊಲೀಸ್ ಸಿಬ್ಬಂದಿ, ಮೈಸೂರಿನ ರೀಜನಲ್ ಫಾರೆನ್ಸಿಕ್ ಲ್ಯಾಬ್​ಗೆ ರವಾನೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಸಂಗ್ರಹಿಸಿದ  ಆಹಾರ ಸ್ಯಾಂಪಲ್​ಗಳನ್ನ ಸಿಎಫ್​ಟಿಆರ್​ಐ, ಎಫ್ಎಸ್ಐಲ್ ಲ್ಯಾಬ್​ಗೆ ಕಳುಹಿಸಲಾಗಿತ್ತು.ಎಲ್ಲಾ ರೋಗಿಗಳು ಮೈಸೂರಿನಲ್ಲೇ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದ್ದು, ಶೀಘ್ರದಲ್ಲಿ ವರದಿ ನೀಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.