Breaking News

ನಟಿ ವಿಜಯಲಕ್ಷ್ಮೀಗೆ ಲೈಂಗಿಕ ಕಿರುಕುಳ ಆರೋಪ..?

ಆರ್ಥಿಕ ನೆರವು ನೆಪದಲ್ಲಿ ನಟ ರವಿ ಪ್ರಕಾಶ್ ದೌರ್ಜನ್ಯ....

SHARE......LIKE......COMMENT......

ಬೆಂಗಳೂರು:

ಸ್ಯಾಂಡಲ್​ವುಡ್​ ನಟ ರವಿ ಪ್ರಕಾಶ್​ ಲೈಂಗಿಕ ಕಿರುಕುಳ ನೀಡ್ತಿದ್ದಾರೆ ಅಂತಾ ನಟಿ ವಿಜಯಲಕ್ಷ್ಮಿ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ನಟಿ ವಿಜಯಲಕ್ಷ್ಮಿ, ಹಣಕಾಸಿನ ತೊಂದರೆಯಲ್ಲಿ ಸಿಲುಕಿದ್ರು. ಇದನ್ನೇ ಎನ್​ಕ್ಯಾಶ್​ ಮಾಡಿಕೊಂಡ ರವಿ ಪ್ರಕಾಶ್​ 1 ಲಕ್ಷ ನೆರವು ನೀಡಿ ತಮಗೆ ಲೈಂಗಿಕ ಕಿರುಕುಳ ನೀಡ್ತಿದ್ದಾರೆ ಅಂತಾ ವಿಜಯಲಕ್ಷ್ಮಿ ಆರೋಪಿಸಿದ್ದಾರೆ.

ಇನ್ನು ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ. ವಿಡಿಯೋ ಮಾಡಿ ತಮ್ಮ ಅಳಳು ತೋಡಿಕೊಂಡಿರೋ ವಿಜಯಲಕ್ಷ್ಮಿ, ಆರೋಗ್ಯ ವಿಚಾರಿಸೋ ನೆಪದಲ್ಲಿ ಬಂದು ರವಿ ಪ್ರಕಾಶ್​ ಕಿರುಕುಳ ಕೊಡ್ತಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ಅಲ್ದೇ ಪದೇ ಪದೇ ಫೋನ್​ ಮಾಡಿ ಕೂಡಾ ಲೈಂಗಿಕ ಕಿರುಕುಳ ನೀಡ್ತಿದ್ದಾರೆ ಅಂತಾ ಹೇಳಿಕೊಂಡಿದ್ದಾರೆ……