ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ದಿನ ವಿಶೇಷತೆ ತೃತೀಯ ಬುಧವಾರ ಮಖೆ ನಕ್ಷತ್ರ |
ರಾಹುಕಾಲ :- ಮಧ್ಯಾಹ್ನ 12: 35 ರಿಂದ 02:02 ವರಿಗೆ |
ಯಮಕಂಟಕ ಕಾಲ:- ಬೆಳಿಗ್ಗೆ 08:16 ರಿಂದ 09:42 ವರಿಗೆ |
ಗುಳಿಕಕಾಲ: ಮಧ್ಯಾಹ್ನ 12:31 ರಿಂದ 01:56ರ ವರೆಗೆ |
ಮೇಷ ಈ ದಿನ ಬರಬೇಕಿದ್ದ ಬಾಕಿ ಹಣ ಬಂದು ಕೈ ಸೇರುತ್ತೆ.ಕುಟುಂಬದವರೊಂದಿಗೆ ಪ್ರವಾಸ ಹೋಗುವಿರಿ. ಪ್ರಯಾಣದಲ್ಲಿ ಎಚ್ಚರ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. |
|
ವೃಷಭ ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಒದಗಿ ಬರುವುದು. ಹಮ್ಮಿಕೊಂಡ ಕಾರ್ಯಗಳು ದೈವಾನುಗ್ರಹದಿಂದ ಪೂರ್ಣಗೊಳ್ಳುವುದು |
|
ಮಿಥುನ
ನಿಧನಾತ್ಮಕ ಚಿಂತನೆ ಯಶಸ್ಸನ್ನು ನಿಮ್ಮದಾಗಿಸುತ್ತದೆ. ವಿರೋಧಿಗಳಿಗೆ ಸೋಲು. ವಿವಾಹ, ಮಂಗಳ ಕಾರ್ಯಗಳಿಗೆ ಅಡೆ ತಡೆ ಬರುವುದು.ಹೊಸ ಮನೆ ಖರೀದಿ ಬಗ್ಗೆ ಯೋಚನೆ ಮಾಡುವಿರಿ |
|
ಕಟಕ ಸ್ನೇಹಿತರಿಂದ ವಂಚನೆಗೊಳಗಾಗುವ ಸಂಭವವಿದೆ.ಕುಟುಂಬದ ವಾತಾವರಣವು ಆನಂದದಿಂದ ಕೂಡಿರುತ್ತದೆ.
|
|
ಸಿಂಹ
ಕೌಟುಂಬಿಕ ಖರ್ಚುಗಳು ಹೆಚ್ಚಾಗಲಿವೆ. ಹಣಕಾಸಿನ ವ್ಯವಹಾರದ ಬಗ್ಗೆ ಎಚ್ಚರವಿರಲಿ. ಮಾತೃ ಸೌಖ್ಯ, ಸುಖ ಭೋಜನ ಉಂಟಾಗುವುದು. ಆರೋಗ್ಯದ ಕಡೆ ಗಮನ ನೀಡಿ |
|
ಕನ್ಯಾ ವೃತ್ತಿಪರರಿಗೆ ವಿಶ್ರಾಂತಿ ಭಾಗ್ಯ, ಬಂಧುಮಿತ್ರರಿಂದ ವಿಮರ್ಶೆ, ಟೀಕೆಗಳು ವ್ಯಾಪಕವಾಗುತ್ತವೆ. ದೂರ ದೃಷ್ಟಿಯಿಂದ ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು |
|
ತುಲಾ ಈಗಾಗಲೇ ಹಮ್ಮಿಕೊಂಡಿರುವ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮುಗಿಸುವತ್ತ ಗಮನ. ಉದ್ಯೋಗಿಗಳಿಗೆ ಬಡ್ತಿ ಸಂಭವ. ವಿದೇಶ ಪ್ರವಾಸ ಯೋಗ, ಷೇರು ವಹಿವಾಟುದಾರರಿಗೆ ಹೆಚ್ಚಿನ ಲಾಭ ಸಾಧ್ಯತೆ. |
|
ವೃಶ್ಚಿಕ ನಿವೇಶನ ಖರೀದಿಸಲು ಯೋಚಿಸುವಿರಿ. ಜಾಗ್ರತೆಯಿಂದ ವ್ಯವಹರಿಸಿರಿ. ಹಣಕಾಸಿನ ವಿಷಯದಲ್ಲಿ ಯೋಚಿಸಿ ಹೆಜ್ಜೆಯಿಡಿ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ |
|
ಧನಸ್ಸು
ಕೆಲವು ಘಟನೆಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸಬಹುದು. ಮಿತ್ರರ ಸಹಕಾರವೂ ದೊರೆಯಲಿದೆ. ವ್ಯಾಪಾರ-ವ್ಯವಹಾರಗಳು ನಿರೀಕ್ಷೆಗೆ ಮೀರಿ ಫಲವನ್ನು ನೀಡುವುದು. ಕೌಟುಂಬಿಕ ಜೀವನ ಉತ್ತಮವಾಗಿರುವುದು
|
|
ಮಕರ ಮನರಂಜನೆಗೆ ಸಮಯ ಮತ್ತು ಹಣ ವ್ಯಯಿಸುವಿರಿ. ಕಲೆಗೆ ಸಂಬಂಧಿಸಿದವರಿಗೆ ಇದು ಶುಭ ಕಾಲ. ಸಹೋದರರಲ್ಲಿ ವಾದ-ವಿವಾದಗಳು ಹೆಚ್ಚು. |
|
ಕುಂಭ ವ್ಯಾಪಾರ, ವಹಿವಾಟುಗಳಲ್ಲಿ ಯಶಸ್ಸು ಪಡೆಯುವಿರಿ. ಯೋಚಿತ ಕಾರ್ಯ ಕಾರ್ಯ ಅನುಕೂಲ. ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯುವುದು |
|
ಮೀನ
ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಖಾಸಗಿ ಉದ್ಯೋಗಿಗಳಿಗೆ ಹೊಸ ಯೋಜನೆಗಳು ಎದುರಾಗುತ್ತವೆ. ಪ್ರಯಾಣದಲ್ಲಿ ಎಚ್ಚರಿಕೆ.. |