ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ದಿನ ವಿಶೇಷತೆ ಸೋಮವಾರ ಅಷ್ಠಮಿ ಸ್ವಾತಿ ನಕ್ಷತ್ರ |
ರಾಹುಕಾಲ :- ಬೆಳಗ್ಗೆ 08:15 ರಿಂದ 9:42ರ ವರೆಗೆ |
ಯಮಗಂಡ ಕಾಲ:- ಬೆಳಗ್ಗೆ 11:09 ರಿಂದ 12:36ರ ವರೆಗೆ |
ಗುಳಿಕಕಾಲ: ಬೆಳಿಗ್ಗೆ :-ಮಧ್ಯಾಹ್ನ 01:47 ರಿಂದ 03:31ರ ವರೆಗೆ |
ಮೇಷ ಆಸ್ತಿ ಲಾಭ ಸಾಧ್ಯತೆ, ಗುತ್ತಿಗೆದಾರರಿಗೆ ಕೆಲಸದಲ್ಲಿ ತೊಂದರೆ ಸಾಧ್ಯತೆ, ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುವವರಿಗೆ ಧನಲಾಭ |
|
ವೃಷಭ ತೋಟದ ಬೆಳೆಗಾರರಿಗೆ ಲಾಭ, ಕ್ರೀಡಾಪಟುಗಳಿಗೆ ಹಂತ ಹಂತವಾಗಿ ಅಭಿವೃದ್ಧಿ ಅವಕಾಶಗಳು ಕಂಡುಬರುತ್ತವೆ |
|
ಮಿಥುನ
ಮನೆಯಲ್ಲಿ ಸಂತಸದ ವಾತಾವರಣ ಮೂಡಿಬರಲಿದೆ. ಮಕ್ಕಳ ಅಭಿವೃದ್ಧಿ ನಿರೀಕ್ಷಿತ ಪ್ರತಿಫಲ ಲಭಿಸುತ್ತದೆ |
|
ಕಟಕ ದುಂದು ವೆಚ್ಚದಿಂದಾಗಿ ಆರ್ಥಿಕ ಹೊರೆ ಸಾಧ್ಯತೆ, ಖರೀದಿ ವ್ಯವಹಾರದಲ್ಲಿ ಅಡೆತಡೆ
|
|
ಸಿಂಹ
ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ, ವ್ಯಾಸಂಗಕ್ಕಾಗಿ ಸ್ಥಳ ಬದಲಾವಣೆ ಸಾಧ್ಯತೆ, ವೃದ್ಧರಿಗೆ ಆರೋಗ್ಯದಲ್ಲಿ ತೀವ್ರತರದ ಬದಲಾವಣೆ |
|
ಕನ್ಯಾ ಶೃಂಗಾರ ಸಾಮಾಗ್ರಿಗಳ ವ್ಯಾಪಾರಸ್ಥರಿಗೆ ವಿಶೇಷ ಲಾಭ, ತಂತ್ರಜ್ಞರಿಗೆ ಉತ್ತಮ ಆದಾಯದ ನಿರೀಕ್ಷೆಗೆ ತಕ್ಕ ಪ್ರತಿಫಲ |
|
ತುಲಾ ಜಂಟಿ ವ್ಯವಹಾರದಲ್ಲಿ ಗೊಂದಲ ಸಾಧ್ಯತೆ, ಉದ್ಯೊಗಸ್ಥರಿಗೆ ಅಧಿಕಾರಿಗಳಿಂದ ಕಿರಿಕಿರಿ, ಬಹುದಿನಗಳಿಂದ ಬರಬೇಕಾದ ಬಾಕಿ ಹಣ ವಸೂಲಾಗುವ ಸಾಧ್ಯತೆ
|
|
ವೃಶ್ಚಿಕ ಹೆಣ್ಣು ಮಕ್ಕಳಿಗೆ ವಿವಾಹ ನಿಶ್ಚಯವಾಗುವ ಸಾಧ್ಯತೆ, ವೈದ್ಯಕೀಯ ವೃತ್ತಿಯವರಿಗೆ ಉದ್ಯೋಗದಲ್ಲಿ ಎಚ್ಚರಿಕೆ ಅಗತ್ಯ. |
|
ಧನಸ್ಸು
ಎಣ್ಣೆ & ನೀರು ಮುಂತಾದ ವ್ಯಾಪಾರಸ್ಥರಿಗೆ ಹೇರಳ ಲಾಭ, ಔಷಧ ವಿತರಕರು, ಮಾರಾಟಗಾರರಿಗೆ ಬಿಡುವಿಲ್ಲದ ಕೆಲಸ
|
|
ಮಕರ ದಾನ ಧರ್ಮಾದಿಗಳಿಂದ ಮಾನಸಿಕ ಶಾಂತಿ ದೊರಕಲಿದೆ, ಸಂತಾನ ಆಪೇಕ್ಷಿತರಿಗೆ ಶುಭ ಸುದ್ದಿ |
|
ಕುಂಭ ಯಾವುದೇ ವಿಷಯದಲ್ಲಿ ಆತುರ ಬೇಡ, ಆರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ |
|
ಮೀನ
ಲೇವಾದೇವಿ ವ್ಯವಾಹಾರದಲ್ಲಿ ಉತ್ತಮ ಲಾಭ, ಚಿನ್ನಾಭರಣಗಳು ಪ್ರಾಪ್ತಿ ಸಾಧ್ಯತೆ, ಕುಟುಂಬದ ಜತೆ ದೂರ ಪ್ರಯಾಣ ಯೋಗ |