ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ದಿನ ವಿಶೇಷತೆ: |
ಚತುರ್ದಶಿ ತಿಥಿ ಬುಧವಾರ ಪುಬ್ಬ ನಕ್ಷತ್ರ |
ರಾಹುಕಾಲ:- ಮಧ್ಯಾಹ್ನ 12 : 30 ರಿಂದ 02:01 ವರಿಗೆ |
ಯಮಕಂಟಕ ಕಾಲ:-ಬೆಳಗ್ಗೆ 07:57 ರಿಂದ 09:28 ವರಿಗೆ |
ಮೇಷ ಅಧಿಕ ಶ್ರಮಕ್ಕೆ ತಕ್ಕಷ್ಟು ಆದಾಯವೂ ಬರುವುದರಿಂದ ಹಣಕಾಸಿನ ತೊಂದರೆ ಇರುವುದಿಲ್ಲ. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿ.ವಿದೇಶ ಸಂಚಾರಕ್ಕೆ ಅವಕಾಶಗಳು ದೊರಕಲಿವೆ |
|
ವೃಷಭ ನೆರೆಹೊರೆಯರಲ್ಲಿ ಮನಸ್ತಾಪಕ್ಕೆ ಕಾರಣ ರಾಗದಿರಿ. ಬಾಡಿಗೆದಾರರಿಗೆ ಮನೆ ಬದಲಾವಣೆಯ ಸಾಧ್ಯತೆ ಇದೆ. ವಾಹನಗಳಿಗಾಗಿ ರಿಪೇರಿಯ ಖರ್ಚುಗಳು ಹೆಚ್ಚು ಇರುತ್ತೆ ,ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. |
|
ಮಿಥುನ ಸರಕಾರಿ ಕೆಲಸದವರಿಗೆ ವರ್ಗಾವಣೆಯ ಸಾಧ್ಯತೆ ಇದೆ.ರಾಜಕೀಯ ದಲ್ಲಿ ಮುನ್ನಡೆ ತೋರಿ ಬಂದರೂ ಅಪವಾದ ಹೆಚ್ಚು,ಹೊಸ ಗೆಳೆತನದಿಂದ ಕಾರ್ಯಸಾಧನೆಯಾಗಲಿದೆ |
|
ಕಟಕ ರಿಪೇರಿ ಕೆಲಸಗಾರರಿಗೆ ಆದಾಯ ಹೆಚ್ಚಲಿದೆ.ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಮಾನಸಿಕ ಖಿನ್ನತೆ ಮೂಡುವುದು. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿ
|
|
ಸಿಂಹ
ಗೃಹ ನಿರ್ಮಾಣ ಕಾರ್ಯಗಳಿಗೆ ಇದು ಸಕಾಲ. ನ್ಯಾಯಾಲಯದ ಕೆಲಸಕಾರ್ಯಗಳಲ್ಲಿ ಯಶಸ್ಸು , |
|
ಕನ್ಯಾ ಮದುವೆ ಪ್ರಯತ್ನ ಮಾಡುವವರಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು.ಆರ್ಥಿಕ ಪರಿಸ್ಥಿತಿ ಸಾಧಾರಣವಿದ್ದು, ಖರ್ಚುಗಳು ಹೆಚ್ಚು |
|
ತುಲಾ ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆ ನಡೆಯುವುದು ಹಾಗೂ ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ |
|
ವೃಶ್ಚಿಕ ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಹಣಕಾಸು ಒಪ್ಪಂದಗಳ ವಿಷಯದಲ್ಲಿಜಾಗ್ರತೆಯಿಂದಿರಿ. ಆಸ್ತಿ ವಿಷಯದಲ್ಲಿ ಎಚ್ಚರವಹಿಸುವುದು ಸೂಕ್ತ. |
|
ಧನಸ್ಸು
ಹೊಸ ವಾಹನ ಖರೀದಿಗೆ ಮುಂದಾಗುವಿರಿ. ಆದರೆ ಖರ್ಚುಗಳ ಬಗ್ಗೆ ಹಿಡಿತವಿರಲಿ. |
|
ಮಕರ ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡು ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆದರೆ ದೃಢ ಚಿತ್ತದಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು. |
|
ಕುಂಭ ಹೊಸ ಕಾರ್ಯಕ್ರಮ ಅಥವಾ ಯೋಜನೆಗಳ ಅನುಷ್ಠಾನಕ್ಕೆ ಈ ದಿನ ನಿಮಗೆ ಅನುಕೂಲವಾಗಿದೆ. ವಾಹನ ಖರೀದಿ ಬಗ್ಗೆ ಚಿಂತಿಸುವಿರಿ. |
|
ಮೀನ
ಸಿನಿಮಾ ಹಾಗೂ ವಜ್ರಾಭರಣ ವ್ಯಾಪಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಹೆಚ್ಚು ಲಾಭ ದೊರೆಯುತ್ತದೆ.ರಾಜಕೀಯ ವ್ಯಕ್ತಿಗಳಿಗೆ ಹೆಚ್ಚಿನ ಅಭಿವೃದ್ಧಿ,ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. |