ನೇಪಿಯರ್ /ನ್ಯೂಜಿಲ್ಯಾಂಡ್:
ನಿಮ್ಮ ಆಟ ನಡೆಯಲ್ಲಾ ಅಂದಿದ್ದವರ ಬಾಲ ಕಟ್…ಯೆಸ್ ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಲಭಿಸಿದೆ…ಏಕದಿನ ಸರಣಿಗೂ ಮುನ್ನ ನ್ಯೂಜಿಲ್ಯಾಂಡ್ ಮಾಜಿ ಕ್ರಿಕೆಟಿಗರು ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಸಾಲದು. ಮುಂದಿದೆ ಮಾರಿಹಬ್ಬ ಎಂದು ಹೇಳಿದ್ದ ಕಿವೀಸ್ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ತಿರುಗೇಟು ನೀಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡ 157 ರನ್ ಗೆ ಅಲೌಟ್ ಆಯಿತು. ಇನ್ನು 158 ರನ್ ಗಳ ಅಲ್ಪಮೊತ್ತದ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾಗೆ ಆರಂಭಿಕ ಆಟಗಾರ ಶಿಖರ್ ಧವನ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಪ್ರತಿಕೂಲ ವಾತಾವರಣ ಹಿನ್ನೆಲೆಯಲ್ಲಿ ಡಕ್ ವರ್ಥ್ ಲೂಯಿಸ್ ನಿಯಮದಂತೆ ಟೀಂ ಇಂಡಿಯಾಗೆ 156 ರನ್ ಗಳ ಗುರಿ ನೀಡಲಾಗಿತ್ತು.ಭಾರತ ಪರ ರೋಹಿತ್ ಶರ್ಮಾ 11, ಶಿಖರ್ ಧವನ್ ಅಜೇಯ 75, ವಿರಾಟ್ ಕೊಹ್ಲಿ 45 ಹಾಗೂ ಅಂಬಟ್ಟಿ ರಾಯುಡು ಅಜೇಯ 13 ರನ್ ಗಳಿಸಿದ್ದಾರೆ.
ಇನ್ನು ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಫೆರ್ಗೂಸನ್ ಹಾಗೂ ಬ್ರಾಸ್ವೆಲ್ ತಲಾ 1 ವಿಕೆಟ್ ಪಡೆದಿದ್ದಾರೆ. ನ್ಯೂಜಿಲ್ಯಾಂಡ್ ಪರ ಬ್ಯಾಟಿಂಗ್ ನಲ್ಲಿ ಕೇನ್ ವಿಲಿಯಮ್ಸನ್ 64, ರಾಸ್ ಟೇಲರ್ 24, ಸಂಟ್ನೇರ್ 14 ರನ್ ಗಳಿಸಿದ್ದಾರೆ. ಹಾಗೂ ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಕುಲದೀಪ್ ಯಾದವ್ 4, ಮೊಹಮ್ಮದ್ ಶಮಿ 3, ಚಹಾಲ್ 2 ಹಾಗೂ ಕೇದಾರ್ ಜಾದವ್ 1 ವಿಕೆಟ್ ಪಡೆದರು…..