ಬಾಗಲಕೋಟೆ:
ಕಾಯಿಲೆಗೆ ಮನನೊಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಅಶೋಕ ಕಾಲೋನಿಯಲ್ಲಿ ನಡೆದಿದೆ.
ಸದಾಶಿವ ಮಾಂಡವಕರ(51) ಹಾಗೂ ಗೀತಾ(45) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಪತಿ ಸದಾಶಿವ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರು. ಪತ್ನಿಗೂ ಕಾಯಿಲೆ ಬರಬಹುದು ಎನ್ನುವ ಆತಂಕದಿಂದ ಮನನೊಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ……