ಚಿತ್ರದುರ್ಗ:
ವಿಶ್ವ ಪಲ್ಸ್ ಪೋಲಿಯೋ ದಿನಾಚರಣೆ ಅಂಗವಾಗಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ ಬೃಹತ್ ಜಾಥಾ ನಡೆಸಿದರು.ರೋಟರಿ ಮತ್ತು ಇನ್ನರ್‌ವೀಲ್ ಕ್ಲಬ್‌ಗಳ ಸಹಯೋಗದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ಬಳಿಕ ಗಾಂಧಿವೃತ್ತ ಹಾಗೂ ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಅರಿವು ಮೂಡಿಸಿದರು.
ಡಿಸ್ಟ್ರಿಕ್ಟ್ ಪಲ್ಸ್ ಪೋಲಿಯೋ ಚೇರ್ಮನ್ ಎಂ.ಕೆ.ರವೀಂದ್ರ, ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರೇವಣಸಿದ್ದಪ್ಪ, ಇನ್ನರ್‌ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ರೇಖಾ ಸಂತೋಷ್, ಕಾರ್ಯದರ್ಶಿ ಶೈಲಾಜಾ, ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‌ಮಿಲ್ ಸಿಟಿ ಅಧ್ಯಕ್ಷೆ ಜಯಶ್ರೀ ಷಾ, ಕಾರ್ಯದರ್ಶಿ ಪಿ.ಬಿ.ಶಿವರಾಂ, ಬಾಪೂಜಿ, ವಾಸವಿ ಶಾಲೆ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿದ್ದರು…..